Pehalgam: ಪಹಲ್ಗಾಮ್ ನಲ್ಲಿ ರಕ್ತಪಾತ ಮಾಡಿದ ಉಗ್ರರು ಈಗ ಎಲ್ಲಿದ್ದಾರೆ ಎಂಬುದು ಪತ್ತೆ
ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಉಗ್ರರಿಗಾಗಿ ಭಾರತೀಯ ಸೇನೆ ಈಗ ತೀವ್ರ ಹುಡುಕಾಟ ನಡೆಸುತ್ತಿದೆ. ಈಗಿನ ಮಾಹಿತಿ ಪ್ರಕಾರ ಈ ಉಗ್ರರು ಮೂಸಾ ಪೀರ್ ಪಂಜಾಲ್ ಶ್ರೇಣಿಯ ಮೇಲಿನ ಪ್ರದೇಶಗಳಲ್ಲಿ ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ.
ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ನಾಲ್ವರು ಉಗ್ರರ ರೇಖಾ ಚಿತ್ರಗಳನ್ನು ಈಗಾಗಲೇ ಬಿಡುಗಡೆ ಗೊಳಿಸಲಾಗಿದೆ. ಇವರನ್ನು ಪಾಕಿಸ್ತಾನದ ಅಲಿ ಭಾಯಿ ಅಲಿಯಾಸ್ ತಲ್ಹಾ, ಆಸಿಫ್ ಫೌಜಿ, ಆದಿಲ್ ಹುಸೇನ್ ಥೋಕರ್ (ಅನಂತ್ ನಾಗ್ ನಿವಾಸಿ), ಪುಲ್ವಾಮಾದ ಅಹ್ಸಾನ್ ಎಂದು ಗುರುತಿಸಲಾಗಿದೆ.
ಇದೀಗ ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ಚುರುಕುಗೊಳಿಸಿದೆ. ನಿನ್ನೆಯಷ್ಟೇ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಉಗ್ರ ಆಸಿಫ್ ಶೇಖ್ ಮನೆಯನ್ನು ಉಡೀಸ್ ಮಾಡಲಾಗಿತ್ತು.