ಸಾವಿರಾರು ಕೆಜಿ ಮಾಂಸ ಹೊರಟಿತ್ತು ಎಲ್ಲಿಗೆ?

ಶುಕ್ರವಾರ, 23 ಆಗಸ್ಟ್ 2019 (19:20 IST)
ರಾಜ್ಯ ರಾಜಧಾನಿಗೆ ಅಕ್ರಮವಾಗಿ ದನದ ಮಾಂಸ ಸಾಗಿಸಲಾಗುತ್ತಿತ್ತು.
ಮಾಂಸ ಸಾಗಿಸುತ್ತಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ. ಸಾವಿರಾರು ಕೆ.ಜಿ.ದನದ ಮಾಂಸವನ್ನು ಆಂದ್ರದಿಂದ ಬೆಂಗಳೂರಿಗೆ ಸಾಗಿಸಲಾಗ್ತಿತ್ತು.

ಆಂದ್ರದ ಹಿಂದೂಪುರದಿಂದ ನಗರದ ಬನ್ನೇರುಘಟ್ಟಕ್ಕೆ ಸಾಗಿಸಲಾಗ್ತಿದ್ದ ದನದ ಮಾಂಸ ಇದಾಗಿತ್ತು. ಪ್ರತಿದಿನ ದೊಡ್ಡಬಳ್ಳಾಪುರ ಮಾರ್ಗವಾಗಿ ದನದ ಮಾಂಸ ಸಾಗಿಸಲಾಗ್ತಿದೆ. ಮಾರ್ಗದ ಎಲ್ಲಾ ಪೊಲೀಸರಿಗೆ ಮಾಮೂಲಿ ಕೊಡುತ್ತಿದ್ದೆ ಎಂದು ವಾಹನ‌ ಚಾಲಕನು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬ ವಿಷಯ ಬಹಿರಂಗಗೊಂಡಿದೆ.

ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿತ್ತು ದನದ ಮಾಂಸ ತುಂಬಿದ್ದ ಸರಕು ಸಾಗಾಣೆ ವಾಹನ.
ರಾಜಾನುಕುಂಟೆ ಬಳಿ ಅಕ್ರಮ ಮಾಂಸ ಸಾಗಾಣೆ ವಾಹನವನ್ನು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ತಡೆಹಿಡಿದಿದ್ದಾರೆ.

ದೊಡ್ಡಬಳ್ಳಾಪುರ ರಸ್ತೆ ಅರದೇಶನಹಳ್ಳಿ ಟೋಲ್ ಬಳಿ ವಾಹನವನ್ನು ಹಿಡಿದ ಜಾಗರಣಾ ವೇದಿಕೆ ಕಾರ್ಯಕರ್ತರು,
ಅಕ್ರಮ ವಾಹನ ಮತ್ತು ಮಾಂಸ ರಾಜಾನುಕುಂಟೆ ಪೊಲೀಸರ ವಶಕ್ಕೆ ಒಪ್ಪಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ