ಅಕ್ರಮವಾಗಿ ಶಿಕಾರಿ ಮಾಡಿ ಜಿಂಕೆ ಮಾ0ಸ ಪಾಲು ಮಾಡುತ್ತಿದ್ದ ಮೂವರ ಬಂಧನ

ಗುರುವಾರ, 18 ಅಕ್ಟೋಬರ್ 2018 (22:40 IST)
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜನ್ನಪುರ ಸಮೀಪ ಅಕ್ರಮವಾಗಿ ಶಿಕಾರಿ ಮಾಡಿ ಜಿಂಕೆ ಮಾ0ಸ ಪಾಲು ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ಕನ್ನಹಳಿಯ ಹೇಮಶೇಖರ ಎಂಬುವರ ಕಾಫಿ ತೋಟದಲ್ಲಿ  ಕೂಲಿ ಮಾಡಿತ್ತಿದ ಮೂವರನ್ನು ಬಂಧಿಸಿದ್ದಾರೆ. ಬಂಧಿತ  ಮಣಿ, ಸುಂದರ್, ಗಜೇಂದ್ರ ಎಂಬುವರಿಂದ ಸುಮಾರು 8 ಕೆಜಿ ಜಿಂಕೆ ಮಾಂಸ, ತಲೆ, ಚರ್ಮ, ಊರೂಳು, ಪಾತ್ರೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಪ್ರಹ್ಲಾದ ನೇತೃತ್ವದದಲ್ಲಿ ಕಾರ್ಯಚರಣೆ ನೆಡೆಸಿ ಮೂರು ಬೇಟೆಗಾರನ್ನು ಬಂಧಿಸಿದ್ದಾರೆ.

ತೋಟದಲ್ಲಿ ಕೂಲಿ ಮಾಡುವ ಇವರು ಜಿಂಕೆ ಶಿಕಾರಿ ಮಾಡಿ ತೋಟದ ಕಾಲೊನಿಯಲ್ಲಿ ಪಾಲು ಮಾಡುವಾಗ ಮಾಹಿತಿ ಬಂದ ಹಿನ್ನೆಲೆ ಕಾರ್ಯಚರಣೆ ನಡೆಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣವನ್ನು  ದಾಖಲಿಸಿದ್ದಾರೆ. ಈ ಕಾರ್ಯಚರಣೆಯ ನೇತೃತ್ವ ವಹಿಸಿದ ವಲಯ ಅರಣ್ಯ ಅಧಿಕಾರಿ ಪ್ರಹ್ಲಾದ ಹಾಗು ಸಿಬ್ಬಂದಿ ಈ ಬೇಟೆಗಾರರನ್ನು ವಶಕ್ಕೆ ಪಡೆದಿದ್ದಾರೆ. ಮೂಡಿಗೆರೆಯ ಪ್ರತಿಷ್ಠಿತ ರಾಜಕಾರಣಿಗಳ ಮನೆಗಳಿಗೆ ಮಾಂಸ ಸರಬರಾಜು ಮಾಡಲಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ತಲೆ ಮರಿಸಿಕೂಂಡಿರುವ ಒಬ್ಬ ನನ್ನು  ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ