ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವಿಶೇಷ ಪೊಲೀಸ್ ಪಡೆ ಮಾವೋವಾದಿಗಳ ಚಲನವಲನವನ್ನು ಗಮನಿಸಿ ಶರಣಾಗುವಂತೆ ಹೇಳಿದ್ದರು. ಆ ವೇಳೆ ಮಾವೋವಾದಿಗಳು ಪೊಲೀಸ್ ಪಡೆಯತ್ತ ಗುಂಡು ಹಾರಿಸಲು ಯತ್ನಿಸಿದ್ದು, ಪ್ರತೀಕಾರವಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಮೂವರು ಮಹಿಳಾ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೂಚಿಸಿದ್ದಾರೆ.