ಕೆಂಪು ಮರ್ಕ್ಯುರಿ ಹೆಸರಿನಲ್ಲಿ ಅಲ್ಯುಮಿನಿಯಂ ಮಾರುತ್ತಿದ್ದ ಮೂವರ ಬಂಧನ

ಗುರುವಾರ, 1 ಜನವರಿ 2015 (16:07 IST)
ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಕೆಂಪು ಮರ್ಕ್ಯುರಿ ಹೆಸರನ್ನು ಬಳಸಿಕೊಂಡು ಅಲ್ಯುಮಿನಿಯಂ ಬ್ಲಾಕ್ ಮಾರುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಎಲ್‌ಟಿಟಿಇ ಮುಖಂಡ ಪ್ರಭಾಕರನ್ ಹತ್ಯೆಯ ಬಳಿಕ ಭಾರತಕ್ಕೆ ಕೆಂಪು ಮರ್ಕ್ಯುರಿ ರವಾನೆಯಾಗುತ್ತಿದೆ. ಎಲ್‌ಟಿಟಿಇ ಬಳಿ ಈ ಕೆಂಪು ಮರ್ಕ್ಯುರಿ ಇದ್ದಿತೆಂದು ಹೇಳಲಾಗುತ್ತಿದೆ.

ಎಲ್ಟಿಟಿಇ ನಾಶವಾದ ಬಳಿಕ ಕೆಂಪು ಮರ್ಕ್ಯುರಿ  ಭಾರತಕ್ಕೆ ಅಕ್ರಮವಾಗಿ ರವಾನೆಯಾಗಿದೆಯೆಂದು ಹೇಳಲಾಗುತ್ತಿದೆ. ಕೆಂಪು ಮರ್ಕ್ಯುರಿಯನ್ನು ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ ಬಳಸಲಾಗುತ್ತಿದೆ. ಸಿಸಿಬಿ ಪೊಲೀಸರು ಖರೀದಿದಾರರ ವೇಷದಲ್ಲಿ ಕೆಂಪು ಮರ್ಕ್ಯುರಿಯನ್ನು ಖರೀದಿಸುವ ನೆಪದಲ್ಲಿ ತೆರಳಿ ಅವರನ್ನು ಬಂಧಿಸಿದ್ದಾರೆ.

8.9 ಕೆಜಿ ಅಲ್ಯುಮಿನಿಯಂ ಬ್ಲಾಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಗಂಡನ್, ಹನೀಫ್, ನಾಗರಾಜ್ ಎಂಬವರನ್ನು ಬಂಧಿಸಲಾಗಿದೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಹೊಸೂರು ಮೂಲದ ಪ್ರಮುಖ ಆರೋಪಿ ಜಯಸಿಂಗ್ ನಾಪತ್ತೆಯಾಗಿದ್ದು ಪೊಲೀಸರು ಶೋಧ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ