ಗುರಾಯಿಸಿದವನ ಕಾಲ ಮೇಲೆ ಕಲ್ಲು ಎತ್ತಿ ಹಾಕಿದ ತುಕಾಲಿ ರೌಡಿಗಳು
 
ಬೆಂಗಳೂರು :ಕಬಾಬ್ ತಿನ್ನಲು ತೆರಳಿದ್ದಾಗ ಗುರಾಯಿಸಿದ ಎಂಬ ಕಾರಣಕ್ಕೆ ಎರಡೂ ತಂಡದ ನಡುವೆ ಜಗಳವಾಗಿತ್ತು. ಈ ವೇಳೆ ಗಲಾಟೆ ಮಾಡಿಕೊಳ್ಳಬೇಡಿ ಎಂದು ಬುದ್ದಿವಾದ ಹೇಳಲು ಮುಂದಾದ ಕಾರ್ತಿಕ್ ಮೇಲೆ ಪವನ್ ತಂಡದವರು ಹಲ್ಲೆ ನಡೆಸಿದ್ದರು. ಸಾರ್ವಜನಿಕರಲ್ಲಿ ಭೀತಿ ಮೂಡಿಸಬೇಕೆಂಬ ಉದ್ದೇಶದಿಂದ ಚಿಲ್ಲರೆ ಪುಂಡರ ತಂಡವೊಂದು ಎದುರಾಳಿಯ ಕಾಲ ಮೇಲೆ ಕಲ್ಲು ಎತ್ತಿಹಾಕಿದ್ದಲ್ಲದೇ ಮನೆ ಬಳಿಯೂ ತೆರಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
									
				ಕಾರ್ತಿಕ್ ಮತ್ತು ವಿನೀಶ್ ಎಂಬುವವರು ಗಾಯಗೊಂಡ ಯುವಕರಾಗಿದ್ದು, ಪವನ್ ಮತ್ತು ಆತನ ತಂಡದ ಪುಂಡರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.