ಬೀದಿ ಬದಿ ವ್ಯಾಪಾರಿಗಳಿಗೆ ಶಾಕ್-ಮತ್ತೆ ಶಾಪಿಂಗ್ ಏರಿಯಾದಲ್ಲಿ ಸದ್ದು ಮಾಡಿದ ಜೆಸಿಪಿ

ಮಂಗಳವಾರ, 7 ನವೆಂಬರ್ 2023 (20:44 IST)
ಜಯನಗರ ಬಿಡಿಎ ಶಾಪಿಂಗ್​ ಕಾಂಪ್ಲೆಕ್ಸ್ ಬಳಿ  ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.ವ್ಯಾಪಾರ ವಹಿವಾಟು ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.ಫುಟ್‌ಪಾತ್‌ ವ್ಯಾಪಾರಿಗಳ ಅಂಗಡಿಮುಂಗಟ್ಟು ತೆರವು ಕಾರ್ಯ ಮಾಡಲಾಗಿದೆ.ಹಬ್ಬದ ಸಂದರ್ಭದಲ್ಲಿ ಬಂಪರ್ ಮಾರಾಟಕ್ಕಾಗಿ  ಮಾರಾಟಗಾರರು ಎದುರು ನೋಡುತ್ತಿದ್ದರು.ಬಿಬಿಎಂಪಿ ಮಾರ್ಷಲ್‌ಗಳ ತಂಡ ಸ್ಥಳಕ್ಕೆ ಆಗಮಿಸಿ, ಬೀದಿಬದಿ ವ್ಯಾಪಾರಿಗಳನ್ನು ಫುಟ್‌ಪಾತ್‌ನಿಂದ ತೆರವುಮಾಡಲಾಗಿದೆ.ಜೆಸಿಬಿ‌ ಮೂಲಕ ಅಂಗಡಿಗಳನ್ನ ಬಿಬಿಎಂಪಿ ಕೆಡವಿದೆ.
 
ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ  ಬೀದಿ ವ್ಯಾಪಾರಿಗಳ ತೆರವು ಕಾರ್ಯಚರಣೆ ಮುಂದುವರೆದಿದೆ. ಇತ್ತೀಚೆಗೆ ಮಲೇಶ್ವರಂ ನಲ್ಲಿಯೂ ತೆರವು ಕಾರ್ಯಚರಣೆ ನಡೆದಿದೆ.ಪಾದಚಾರಿಗಳಿಗೆ ಸುಗಮ ರಸ್ತೆ ಮಾಡಲು ಬೀದಿ ವ್ಯಾಪಾರಿಗಳ ಶಡ್ ,ಬಟ್ಟೆ ಎಲ್ಲವನ್ನು ಮಾರ್ಷಲ್ಸ್ ತೆರವು ಮಾಡಿದ್ದಾರೆ.ಸ್ಥಳದಲ್ಲಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು,ಮಾರ್ಷಲ್ ಗಳಿಂದ ತೆರವು ಕಾರ್ಯಚರಣೆ ನಡೆದಿದೆ.
 
ಪಾಲಿಕೆ‌ ಕಾರ್ಯಚರಣೆಗೆ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ.ಜೆಸಿಬಿ ತಡೆದು ಬೀದಿಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೋಲಿಸ್ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆದಿದೆ.ಆದೇಶ ಹಾಗೂ ಕಾನೂನು ಬಗ್ಗೆ ಪಾಲಿಕೆ ಅಧಿಕಾರಿಗಳಿಂದ ಮನದಟ್ಟು ಮಾಡಲು ಪ್ರಯತ್ನ ನಡೆದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ