ಕಪ್ಪಾದ ತುಟಿಯ ಬಣ್ಣ ಕೆಂಪಾಗಲು ಇದನ್ನು ಹಚ್ಚಿ

ಶನಿವಾರ, 16 ನವೆಂಬರ್ 2019 (06:08 IST)
ಬೆಂಗಳೂರು : ಕೆಂಪಾದ ತುಟಿಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಕೆಲವರ ತುಟಿಗಳು ಕಪ್ಪಾಗಿರುತ್ತದೆ. ಇದನ್ನು 1 ವಾರದಲ್ಲಿ ಕೆಂಪಾಗಿ, ಆರೋಗ್ಯವಾಗಿಸಲು ಇದನ್ನು ಬಳಸಿ.




ಮೊದಲಿಗೆ 1 ಚಮಚ ಸಕ್ಕರೆ ಹಾಗೂ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ  ರಾತ್ರಿಯ ವೇಳೆ ತುಟಿಯ ಮೇಲೆ ಚೆನ್ನಾಗಿ ಮಸಾಜ್ ಮಾಡಬೇಕು. ಬಳಿಕ ಅದನ್ನು ವಾಶ್ ಮಾಡಿ.


ನಂತರ ಒಂದು ಲಿಪ್ ಬಾಮ್ ರೆಡಿ ಮಾಡಿಕೊಳ್ಳಿ. ಇದಕ್ಕೆ  2 ಚಮಚ ಬೀಟ್ ರೋಟ್ ರಸ, 1 ಚಮಚ ವ್ಯಾಸಲಿನ್, 1ಚಮಚ ಕೊಬ್ಬರಿ ಎಣ್ಣೆ, ವಿಟಮಿನ್ ಇ ಕ್ಯಾಪ್ಸುಲ್ 2 ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಜ್ ನಲ್ಲಿಡಿ. ಇದನ್ನು ರಾತ್ರಿ ಮಲಗುವ ಮುಂಚೆ ಲಿಪ್ ಮಸಾಜ್ ಆದ ಬಳಿಕ ಈ ಲಿಪ್ ಬಾಮ್ ಹಚ್ಚಿ. ಹೀಗೆ ಮಾಡಿದರೆ 1 ವಾರದಲ್ಲಿ ನಿಮ್ಮ ತುಟಿ ಕೆಂಪಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ