ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಪುನರ್ ವಿಂಗಡನೆ ಗಡುವು ವಿಸ್ತರಣೆ

ಭಾನುವಾರ, 31 ಅಕ್ಟೋಬರ್ 2021 (13:59 IST)
2022ರ ಜನವರಿ ತನಕ 243 ವಾರ್ಡ್‌ಗಳ ಪುನರ್ ವಿಂಗಡನೆಗೆ ಅವಕಾಶ ನೀಡಲಾಗಿದೆ.
 
ಕರ್ನಾಟಕ ಸರ್ಕಾರ ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ -1976ರಂತೆ 198 ವಾರ್ಡ್‌ಗಳಿದ್ದ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಹೊಸದಾಗಿ ವಾರ್ಡ್ ಪುನರ್ ವಿಂಗಡನೆ ಆದ ಬಳಿಕ ಬಿಬಿಎಂಪಿ ಚುನಾವಣೆ ನಡೆಯಲಿದೆ.
ಅಧಿಕಾರಿಗಳು ಕೋವಿಡ್ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು ಕೋವಿಡ್‌ಗೆ ತುತ್ತಾದ ಪ್ರಮುಖ ಜಿಲ್ಲೆಯಾಗಿದೆ. ಲಾಕ್‌ಡೌನ್ ನಿರ್ವಹಣೆ ಸೇರಿದಂತೆ ವಿವಿಧ ಕೋವಿಡ್ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದರು. ಆದ್ದರಿಂದ ಸಮಿತಿಗೆ ನೀಡಿದ್ದ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.
 
2020 ಜನವರಿಯಲ್ಲಿ ಸರ್ಕಾರ ವಾರ್ಡ್‌ಗಳ ಪುನರ್ ವಿಂಗಡೆನೆ ಮಾಡಲು ಸಮಿತಿ ರಚನೆ ಮಾಡಿತ್ತು. ಆದರೆ ಮೊದಲ ಸಭೆ ನಡೆದಿದ್ದು ಜುಲೈನಲ್ಲಿ. ಮೊದಲು ಸಮಿತಿಗೆ ಜುಲೈಯ ಗಡುವು ನೀಡಲಾಗಿತ್ತು. ಆದರೆ ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ ಗಡುವನ್ನು 2022ರ ಜನವರಿ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ