ಟಿಪ್ಪು ಜಂಯತಿಗೆ ಸ್ಥಳೀಯ ಶಾಸಕ, ಮುಸ್ಲಿಂ ಮುಖಂಡ ಗೈರು
ಟಿಪ್ಪು ಸುಲ್ತಾನ್ ಜಂಯತಿಗೆ ಮುಸ್ಲಿಂ ಮುಖಂಡರೂ ಆಗಿರುವ ಶಾಸಕರೊಬ್ಬರು ಗೈರಾಗಿರುವ ಘಟನೆ ನಡೆದಿದ್ದು, ಶಾಸಕರ ಗೈರು ಅನುಮಾನ ಮೂಡಿಸಿದೆ.
ಶಾಸಕರ ಗೈರು ಅನುಮಾನ ಮೂಡಿಸಿದೆ. ಬೀದರ್ ನ ಸ್ಥಳೀಯ ಶಾಸಕ ರಹೀಂಖಾನ್ ಟಿಪ್ಪು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಬೀದರ್ ನಗರದ ರಂಗಮಂದಿರದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಳ್ಳಬೇಕಿದ್ದ ಶಾಸಕರ ಅನುಪಸ್ಥಿತಿ ಎದ್ದುಕಂಡಿತು.
ಶಾಸಕರ ನಡೆಯಿಂದ ಮುಸ್ಲಿಂ ಸಮುದಾಯದವರಲ್ಲಿ ನಿರಾಶೆಗೆ ಕಾರಣವಾಯಿತು. ಬಹುತೇಕ ಮುಸ್ಲಿಂ ಮತಗಳಿಂದ ಗೆಲುವು ಸಾಧಿಸಿಸುತ್ತಿದ್ದ ಬೀದರ್ ಉತ್ತರ ಶಾಸಕರಾದ ರಹೀಂಖಾನ್ ಗೈರಾಗಿರುವುದು ಎದ್ದು ಕಂಡಿತು.