ಟಿಪ್ಪು ಜಯಂತಿ ಬಂದ್ ಮಾಡಿ ; ದಸರಾ ವೇದಿಕೆ ಮೇಲೆ ಸಿಎಂಗೆ ಪ್ರತಾಪ್ ಸಿಂಹ ಮನವಿ
ಬುಧವಾರ, 10 ಅಕ್ಟೋಬರ್ 2018 (11:28 IST)
ಮೈಸೂರು :ನಾಡಹಬ್ಬ ದಸರಾ ಉತ್ಸವ ಇಂದಿನಿಂದ ಶುರುವಾಗಿದ್ದು ಈ ವೇಳೆ ಇದೀಗ ಸಂಸದ ಪ್ರತಾಪ್ ಸಿಂಹ, ಟಿಪ್ಪು ಜಯಂತಿ ಬಂದ್ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.
ಇಂದು ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಡಾ. ಸುಧಾ ಮೂರ್ತಿ ಅವರು ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ಸಮಾರಂಭಕ್ಕೆ ಸಿಎಂ ಕುಮಾರಸ್ವಾಮಿ, ಸಂಸದ ಪ್ರತಾಪ್ ಸಿಂಹ ಮುಂತಾದ ಗಣ್ಯರು ಭಾಗವಹಿಸಿದ್ದರು.
ಈ ವೇಳೆ ದಸರಾ ವೇದಿಕೆಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಟಿಪ್ಪು ಜಯಂತಿ ಬಂದ್ ಮಾಡಿ ಎಂದು ವೇದಿಕೆಯ ಮೇಲೆಯೇ ಸಿಎಂ ಗೆ ಮನವಿ ಮಾಡಿದ್ದಾರೆ. ಇಂದು ದಸರಾ ಆಚರಣೆ ಮಾಡುತ್ತಿದ್ದರೆ ಅದು ಮೈಸೂರು ಅರಸರ ಕೊಡುಗೆ. ಅಂತಹ ಕುಟುಂಬದ ರಕ್ತಪಾತಕ್ಕೆ ಕಾರಣವಾಗಿದ್ದು ಟಿಪ್ಪು, ಈ ಹೊತ್ತಿನಲ್ಲಾದರೂ ಮೈಸೂರು ಅರಸರಿಗೆ ಗೌರವ ನೀಡಿ. ನಿಮ್ಮ ಕಾಲದಲ್ಲಾದರೂ ಟಿಪ್ಪು ಜಯಂತಿ ಬಂದ್ ಮಾಡಿ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.