ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ: ಸಿಎಂ ಸಿದ್ದರಾಮಯ್ಯ

ಭಾನುವಾರ, 23 ಅಕ್ಟೋಬರ್ 2016 (12:35 IST)
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ. ಅಪ್ರತಿಮ ದೇಶಭಕ್ತನಾಗಿದ್ದರಿಂದ 2ನೇ ಬಾರಿಯೂ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಸಂಕುಚಿತ ಮನೋಭಾವದವರಿಂದ ಟಿಪ್ಪುಗೆ ವಿರೋಧ. ಸಂಘ ಪರಿವಾರದವರು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದು ಮರೆತು ಜಾತಿ ರಾಜಕಾರಣ ಮಾಡುತ್ತಿವೆ ಎಂದು ಆರೆಸ್ಸೆಸ್ ವಿರುದ್ಧ ಕಿಡಿಕಾರಿದರು.
 
ಕೆಲವರು ಅತೃಪ್ತರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ನಮ್ಮ ಸರಕಾರದ ಸಾಧನೆ ಬಗ್ಗೆ ಸಿ.ಎಂ.ಇಬ್ರಾಹಿಂ ಮತ್ತು ಎಚ್.ವಿಶ್ವನಾಥ್ ಅಂತಹ ವ್ಯಕ್ತಿಗಳ ಸರ್ಟಿಫಿಕೇಟ್ ಬೇಕಾಗಿಲ್ಲ. ನಮ್ಮ ಸರಕಾರದ ಸಾಧನೆಯ ಬಗ್ಗೆ ಜನತೆ ಹೇಳುತ್ತಾರೆ ಎಂದು ತಿರುಗೇಟು ನೀಡಿದರು. 
 
ಸ್ಟೀಲ್ ಬ್ರಿಡ್ಜ್ಸ್ ಕುರಿತಂತೆ ವಾಸ್ತವ ಚಿತ್ರಣವನ್ನು ಜನರ ಮುಂದಿಡುತ್ತೇವೆ. ಜನತೆಗೆ ತಪ್ಪು ತಿಳುವಳಿಕೆಯಾಗಿದೆ ಅವರ ತಪ್ಪು ತಿಳುವಳಿಕೆಯನ್ನು ನಿವಾರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ