ಟಿಪ್ಪು ಎಕ್ಸ್ಪ್ರೆಸ್ ಇನ್ಮುಂದೆ ಒಡೆಯರ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ

ಶನಿವಾರ, 8 ಅಕ್ಟೋಬರ್ 2022 (07:32 IST)
ಬೆಂಗಳೂರು : ಮೈಸೂರು-ಬೆಂಗಳೂರಿನ ನಡುವೆ ಸಂಚರಿಸುತ್ತಿದ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಲಾಗಿದೆ.
 
ಟಿಪ್ಪು ಎಕ್ಸ್ಪ್ರೆಸ್ ರೈಲಿನೊಂದಿಗೆ ಮೈಸೂರು-ತಾಳಗುಪ್ಪ ಎಕ್ಸ್ಪ್ರೆಸ್ ರೈಲಿಗೂ ಹೆಸರು ಬದಲಾವಣೆ ಮಾಡಿ, ಕುವೆಂಪು ಎಕ್ಸ್ಪ್ರೆಸ್ ಎಂದು ಹೆಸರು ಬದಲಾವಣೆ ಮಾಡಿರುವುದಾಗಿ ಶುಕ್ರವಾರ ರೈಲ್ವೇ ಇಲಾಖೆ ಆದೇಶ ನೀಡಿದೆ.

ಈ ಬಗ್ಗೆ ಮೈಸೂರು ಸಂಸದ ಪ್ರತಿಕ್ರಿಯಿಸಿ, ಶುಕ್ರವಾರದ ಶುಭ ಸುದ್ದಿ. ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು ಒಡೆಯರ್ ಎಕ್ಸ್ಪ್ರೆಸ್ ನಿಮಗೆ ಸೇವೆ ನೀಡಲಿದೆ. ಮೈಸೂರು-ತಾಳಗುಪ್ಪ ರೈಲು ಕುವೆಂಪು ಎಕ್ಸ್ಪ್ರೆಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ