ಇಂದಿನಿಂದ ಓಪನ್ ಆದ ಕಾಲೇಜಿನ‌ ಸ್ಥಿತಿ..!

ಸೋಮವಾರ, 26 ಜುಲೈ 2021 (22:02 IST)
ಇಂದಿನಿಂದ ರಾಜ್ಯದಲ್ಲಿ ಕಾಲೇಜ್ ಓಪನ್ ಆಗಿದೆ. ಇಷ್ಟು ದಿನ ಕೋವಿಡ್ ಅರ್ಭಟದಿಂದ ಮನೆಗಳಲ್ಲೇ ಉಳಿದುಕೊಂಡಿದ್ದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ರೆಡಿಯಾಗಿದ್ರು. ಇಂದಿನಿಂದ ಸರ್ಕಾರ ಪದವಿ ಕಾಲೇಜ್ ಗಳನ್ನ ಆರಂಭ ಮಾಡಲು ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಭೌತಿಕ ತರಗತಿಗಳು ಪುನಾರಂಭವಾಗಿದೆ. ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಲು ವಿವಿಗಳಿಗೆ ಸೂಚನೆ ನೀಡಿದೆ. ವಿದ್ಯಾರ್ಥಿಗಳಿಗೆ ಆನ್ ಲೈನ್ ಅಥವಾ ಆಫ್ ಲೈನ್ ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯವಾಗಿದ್ದು. ಈಗಾಗಲೇ ಶೇ.74% ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗಿದೆ. ಅಂದ ಹಾಗೆ ಲಸಿಕೆ ಪಡೆದ ವಿದ್ಯಾರ್ಥಿಗಳಷ್ಟೇ ಕಾಲೇಜಿಗೆ ತೆರಳಲು ಅವಕಾಶ ಕೊಡಲಾಗಿದೆ. ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ rtpcr ಟೆಸ್ಟ್ ಕಡ್ಡಾಯವಾಗಿದೆ. ಕಾಲೇಜಿಗೆ ಆಗಮಿಸುವ 72 ಗಂಟೆಗಳ ಮುಂಚೆ ಆರ್ ಟಿ ಪಿ ಸಿ ಆರ್ ಟೆಸ್ಟ್ ಮಾಡಿಸಿರಬೇಕು. ಇನ್ನು ಎಲ್ಲಾ ತರಗತಿಗಳು ಸಹ ಹಂತ ಹಂತವಾಗಿ ಪ್ರಾರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ರು. ಹಾಗಾಗಿ ಇಂದು ನಗರದಲ್ಲಿ ಕಾಲೇಜುಗಳಲ್ಲಿ ಕೋವಿಡ್ ನಿಯಮವನ್ನ ಕಡ್ಡಾಯವಾಗಿ ಪಾಲನೆ ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ