50% ಟ್ರಾಫಿಕ್ ದಂಡ ಪಾವತಿಗೆ ಇಂದು ಡೆಡ್ ಲೈನ್

ಶನಿವಾರ, 9 ಸೆಪ್ಟಂಬರ್ 2023 (19:05 IST)
ಟ್ರಾಫಿಕ್ ದಂಡ ರಿಯಾಯಿತಿಗಗೆ 50ರಷ್ಟು ರಿಯಾಯಿತಿ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಇಂದು ಪಾವತಿಗೆ ಕೊನೆ ದಿನ. ಜುಲೈ 6 ರಿಂದ ಸೆ.9ರವರೆಗೆ ಟ್ರಾಫಿಕ್ ದಂಡ ಪಾವತಿಗೆ 2ನೇ ಬಾರಿ ಅವಕಾಶ ನೀಡಲಾಗಿತ್ತು. ಸದ್ಯ ಗಡವು ಮುಗಿದಿದ್ದು ಇಂದು ದಂಡ ಪಾವತಿಗೆ ಕೊನೆ ದಿನವಾಗಿದೆ. ಹೀಗಾಗಿ ಇಂದೇ ದಂಡ ಪಾವತಿ ಮಾಡಿದರೆ 50% ರಿಯಾಯಿತಿ ಸಿಗಲಿದೆ. ಜು.6ರಿಂದ ಈವರೆಗೂ 2,53,519 ಪ್ರಕರಣಗಳ ದಂಡ ವಸೂಲಿಯಾಗಿದೆ. ಈವರೆಗೂ ಅಂದರೆ ಕಳೆದ 64 ದಿನಗಳಲ್ಲಿ 8ಕೋಟಿ,7ಲಕ್ಷದ,73,190 ರೂ. ಬಾಕಿ ದಂಡ ವಸೂಲಿ ಸಂಗ್ರಹವಾಗಿದೆ. ಇಂದು ಕೊನೆ ದಿನ ಹೀಗಾಗಿ, ಯಾರಾದರೂ ಫೈನ್‌ ಬಾಕಿ ಉಳಿಸಿಕೊಂಡಿದ್ದರೆ ಕಟ್ಟುಬಿಡಿ ಅಂತಾ ಇಲಾಖೆ ಧೃಡಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ