ಬೆಂಗಳೂರು : ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಎಂ.ಫಾರೂಕ್ ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹಿನ್ನಲೆ ಬೆಳಿಗ್ಗೆಯೇ ಸಿಎಂ ಕುಮಾರಸ್ವಾಮಿಯವರನ್ನು ಬಿಎಂ.ಫಾರೂಕ್ ಭೇಟಿ ಮಾಡಿದ್ದಾರೆ.
ಬೆಳಿಗ್ಗೆ 7.30ಕ್ಕೆ ಜೆಪಿ ನಗರದ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಬಿಎಂ.ಫಾರೂಕ್ ಸಿಎಂ ಜೊತೆ 1 ಗಂಟೆಗಳಿಗಿಂತ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಕಳೆದ ವರ್ಷ ದೇವೇಗೌಡ್ರು ಫಾರೂಕ್ ರನ್ನ ಯು.ಟಿ ಖಾದರ್ ನಂತೆ ಮಂತ್ರಿ ಮಾಡಿ ಬೆಳೆಸುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಇದೀಗ ಸಚಿವ ಸಂಪುಟ ವಿಸ್ತರಣೆಯಾಗುವ ಕಾರಣದಿಂದ ಫಾರೂಕ್ ಸಿಎಂ ಅವರನ್ನ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.