ಎಲಿವೇಡೆಡ್ ಮೇಲ್ಸೆತುವೆಯ ದುರಸ್ತಿ ಕಾಮಗಾರಿ ಪೂರ್ಣಗೊಂಡು ಲಘು ವಾಹನಗಳ ಸಂಚಾರ ಆರಂಭವಾಗಿದೆ.
ಟೋಲ್ ಸಂಗ್ರಹದ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಶುಕ್ರವಾರ ಪ್ರತಿಭಟನೆ ನಡೆಸಿತು.
ಗೊರಗುಂಟೆಪಾಳ್ಯ-ನಾಗಸಂದ್ರವರೆಗಿನ ಮೇಲ್ಸೇತುವೆ ಸಂಚಾರಕ್ಕೆ ಯೋಗ್ಯವಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವಯುಗ ಟೋಲ್ ಸಂಸ್ಥೆಯ ಮೂಲಕ ವಾಹನ ಸವಾರರಿಂದ ಟೋಲ್ ಶುಲ್ಕವನ್ನು ಪಡೆಯುತ್ತಿದೆ.
ಫ್ಲೈ ಓವರ್ ಸಂಚಾರಕ್ಕೆ ಯೋಗ್ಯವೇ ಅಲ್ಲ ಎಂದ ಮೇಲೆ ವಾಹನ ಸವಾರರು ಏಕೆ ಟೋಲ್ ಕಟ್ಟಬೇಕು? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಪ್ರಶ್ನೆ ಮಾಡಿದೆ. ರಸ್ತೆ ಅಭಿವೃದ್ಧಿಗಾಗಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಆದರೆ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗೆ ಏಕೆ ಟೋಲ್ ಕಟ್ಟಬೇಕು? ಎಂಬುದು ಪ್ರಶ್ನೆಯಾಗಿದೆ.