ಸೆಂಚುರಿ ದಾಟ್ಟಿದ ಟೊಮ್ಯಾಟೊ ದರ

ಶನಿವಾರ, 8 ಜುಲೈ 2023 (17:56 IST)
ತರಕಾರಿ ಮಾರುಕಟ್ಟೆಯಲ್ಲಿ ಈಗ ಕೆಂಪು ಸುಂದರಿಯದ್ದೆ ಸುದ್ದಿ. ಒಂದು ಲೀಟರ್ ಪೆಟ್ರೋಲ್ ಬೇಕಾದ್ರೂ ಕೊಂಡು ಕೊಳ್ಳಬಹುದು ಆದ್ರೆ ಟೊಮ್ಯಾಟೋ ಖರೀದಿಸಲು ಗ್ರಾಹಕಾರ ಕೈ ಸುಡುತ್ತಿದೆ. 60-70 ರೂಪಾಯಿಯಿಂದ ಶತಕ ಸಿಡಿಸಿದ ಟೊಮ್ಯಾಟೋ ದರ ಡಬಲ್ ಸೆಂಚುರಿಗೆ ರೆಡಿಯಾಗಿದೆ. ಟೊಮೆಟೋ ಮಾರುಕಟ್ಟೆಯಾದ ಕೋಲಾರದಲ್ಲಿ ಕೂಡ ಟೊಮೆಟೋ ಆವಕ ಕಡಿಮೆಯಾಗಿದೆ. ಮಳೆಯಿಂದಾಗಿ ಎಲೆ ಸುರುಳಿ ರೋಗದಿಂದ ಇಳುವರಿಯಲ್ಲಿ ಭಾರಿ ಕುಸಿತಗೊಂಡಿದೆ. ಕಳೆದ ಕೆಲವು ದಿನಗಳಿಂಗ ಸುರಿದ ಮಳೆಯಿಂದ ಜಿಲ್ಲಾದ್ಯಂತ ಹಲವೆಡೆ ಟೊಮೆಟೊ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಹಣ್ಣು ಕೊಳೆತುಹೋಗಿದ್ದು, ತೇವಾಂಶ ಹೆಚ್ಚಾಗಿರುವುದರಿಂದ ಬೆಳೆಯಲ್ಲಿ ಬರುತ್ತಿದ್ದ ಹೂವು ಬಾಡುತ್ತಿದೆ. ಇದರಿಂದ ಬೆಲೆ ಏರಿಕೆಯಾಗುತ್ತಿದೆ.

ಯಾವ್ಯಾವ ರಾಜ್ಯದಲ್ಲಿ ಕೆಜಿ ಟೊಮ್ಯಾಟೋಗೆ ಎಷ್ಟು ಇದೆ ಅಂತಾ ನೋಡೊದಾದ್ರೆ
ಉತ್ತರಾಖಂಡ – 250 ರೂಪಾಯಿ
ಉತ್ತರಕಾಶಿ – 200 ರೂಪಾಯಿ
ಕೋಲ್ಕತ್ತಾ – 152 ರೂಪಾಯಿ
ನವದೆಹಲಿ – 120 ರೂಪಾಯಿ
ಚೆನ್ನೈ – 117 ರೂಪಾಯಿ
ಮುಂಬೈ – 108 ರೂಪಾಯಿ
ಬೆಂಗಳೂರು- 120-130 ರೂಪಾಯಿ

 ಹೆಚ್ಚು ಬೆಲೆ ಸಿಕ್ಕರೂ ಕೂಡ ಕೈತುಂಬಾ ಬೆಳೆ ಇಲ್ಲದೆ ರೈತರು ಪರದಾಡುವಂತಾಗಿದೆ. ಕೆಲವು ರಾಜ್ಯಗಳಲ್ಲಿ ಟೊಮೆಟೋ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ