ನಾಳೆ ಕರ್ನಾಟಕ ಬಂದ್, ಏನೇನು ಲಭ್ಯವಿರುತ್ತದೆ, ಏನೇನಿರುವುದಿಲ್ಲ?

ಗುರುವಾರ, 8 ಸೆಪ್ಟಂಬರ್ 2016 (14:33 IST)
ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡಿದ್ದಕ್ಕೆ ಪ್ರತಿಭಟಿಸಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಹಿನ್ನೆಲೆಯಲ್ಲಿ ಏನೇನು ಬಂದ್ ಆಗಲಿದೆ, ಏನೇನು ಕಾರ್ಯನಿರ್ವಹಿಸಲಿದೆ ಎಂದು ಕೆಳಗೆ ನೀಡಲಾಗಿದೆ.
 
ಕಾವೇರಿ ನೀರಿಗಾಗಿ ನಾಳಿನ ಬಂದ್‌ ಸಂಪೂರ್ಣ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ನಾಳೆ ಅಂಗಡಿ, ಮುಂಗಟ್ಟುಗಳನ್ನು ಸ್ವಯಂಪ್ರೇರಣೆಯಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ. ಮಾಲ್‌ಗಳು ಮುಚ್ಚುವ ಸಾಧ್ಯತೆಯಿರುತ್ತದೆ. ಪೆಟ್ರೋಲ್‌ ಬಂಕ್ ಸೇವೆ ಇರುವುದಿಲ್ಲವಾದ್ದರಿಂದ ಇಂದೇ ಸಾಕಷ್ಟು ಪೆಟ್ರೋಲ್ ವಾಹನಗಳಿಗೆ ಹಾಕಿಸಿಕೊಳ್ಳುವ ತರಾತುರಿಯಲ್ಲಿ ವಾಹನ ಸವಾರರಿದ್ದಾರೆ.ಶಾಲೆ ಕಾಲೇಜುಗಳಿಗೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತಗೊಳ್ಳಲಿದೆ. ಟ್ಯಾಕ್ಸಿ ಮತ್ತು ಆಟೋ ಚಾಲಕರು ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಳೆ ಅಗತ್ಯ ವಸ್ತುಗಳಾದ ಹಾಲು, ಔಷಧಿ ಮುಂತಾದ ಸೇವೆಗಳು ಲಭ್ಯವಿರುತ್ತದೆ. ಆಂಬ್ಯುಲೆನ್ಸ್ ಸೇವೆ, ರೈಲು ಸಂಚಾರ, ತರಕಾರಿ ಲಭ್ಯವಿರುತ್ತದೆ.

ನಾಳೆ ಬಂದ್ ಹಿನ್ನೆಲೆಯಲ್ಲಿ ರಜೆಯ ವಿಚಾರ ತೆಗೆದುಕೊಂಡರೆ ರಾಜ್ಯದ ಜನರಿಗೆ ಸಾಲು, ಸಾಲು ರಜೆ ಸಿಗಲಿದೆ. ಶುಕ್ರವಾರ ಕರ್ನಾಟಕ ಬಂದ್‌ಗೆ ರಜೆ, ಶನಿವಾರ ಸೆಕೆಂಡ್ ಸಾಟರ್ಡೆ ರಜಾ, ಭಾನುವಾರ ಎಂದಿನ ರಜ ಮತ್ತು ಮಂಗಳವಾರ ಬಕ್ರೀದ್‌ಗೆ ರಜೆ.

ಸೋಮವಾರ ಒಂದು ದಿನ ರಜೆ ತೆಗೆದುಕೊಂಡರೆ 5 ದಿನಗಳ ಸಾಲು ರಜೆ ಸಿಗಲಿದ್ದು, ಬೆಂಗಳೂರು ನಾಗರಿಕರು  ಆರಾಮವಾಗಿ ಮನೆಯಲ್ಲಿ ಟಿವಿ ನೋಡುತ್ತಾ ಕಾಲಕಳೆಯುತ್ತಾರಾ ಅಥವಾ ವಾಟಾಳ್ ಹೇಳಿದಂತೆ ಬಂದ್‌ನಲ್ಲಿ ಭಾಗವಹಿಸಿ ಮಂಡ್ಯದ ರೈತರಿಗೆ ಬೆಂಬಲ ನೀಡುತ್ತಾರಾ ಎಂದು ಕಾದುನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ