ಮೇ 16ಕ್ಕೆ ‘777 ಚಾರ್ಲಿ’ ಟ್ರೇಲರ್‌ ರಿಲೀಸ್

ಗುರುವಾರ, 12 ಮೇ 2022 (19:48 IST)
ರಕ್ಷಿತ್‌ ಶೆಟ್ಟಿ ನಟನೆಯ ಬಹು ನಿರೀಕ್ಷಿತ ‘777 ಚಾರ್ಲಿ’ ಸಿನಿಮಾದ ಟ್ರೇಲರ್‌ ಮೇ 16ಕ್ಕೆ ಬಿಡುಗಡೆಯಾಗಲಿದೆ. ‘ಮೇ 16ರ ಮಧ್ಯಾಹ್ನ 12.12 ಕ್ಕೆ 777 ಚಾರ್ಲಿ ಚಿತ್ರದ ಟ್ರೇಲರ್‌ ಕನ್ನಡ, ಮಲಯಾಳಂ, ತಮಿಳು, ತೆಲುಗು & ಹಿಂದಿ ಭಾಷೆಗಳಲ್ಲಿ ಟ್ರೇಲರ್‌ ರಿಲೀಸ್‌ ಆಗಲಿದೆ. ಈ ಮೂಲಕ ಧರ್ಮ ಮತ್ತು ಚಾರ್ಲಿಯ ಜಗತ್ತಿನ ಒಂದು ಕಿಟಕಿ ನಿಮಗೋಸ್ಕರ ತೆರೆಯಲಿದೆ’ ಎಂದು ಚಿತ್ರತಂಡ ಹೇಳಿದೆ..‘ಚಾರ್ಲಿ ಹಾಗೂ ಧರ್ಮ ಥಿಯೇಟರ್‌ ಕಡೆ ನಡೆಯುತ್ತಿದ್ದಾರೆ. ಅದಕ್ಕೂ ಮುನ್ನ ಸ್ಪೆಷಲ್ಲಾಗಿ ನಿಮ್ಮ ಮುಂದೆ ಕಾಣಿಸಿಕೊಳ್ತಿದ್ದಾರೆ’ ಎಂದು ರಕ್ಷಿತ್‌ ಶೆಟ್ಟಿ ಟ್ರೇಲರ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ..ಚಿತ್ರ ಜೂನ್ 10ಕ್ಕೆ ತೆರೆ ಕಾಣಲಿದ್ದು, ಕಿರಣ್‌ರಾಜ್‌ ನಿರ್ದೇಶನದ ಚಿತ್ರವನ್ನು ರಕ್ಷಿತ್‌ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋ ಮೂಲಕ ನಿರ್ಮಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ