ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್ನಿಂದ ನಿಷೇಧಿಸಿರುವ ನಿರ್ಧಾರವನ್ನು ಮರಳಿ ಪಡೆಯುವುದಾಗಿ ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಹೇಳಿದ್ದಾರೆ. ಫೈನಾನ್ಷಿಯಲ್ ಟೈಮ್ಸ್ನ ಫ್ಯೂಚರ್ ಆಫ್ ದಿ ಕಾರ್ ಕಾನ್ಫರೆನ್ಸ್ನಲ್ಲಿ ಈ ವಿಚಾರವನ್ನು ಅವರು ಘೋಷಿಸಿದ್ದಾರೆ. ತಮ್ಮನ್ನು ತಾವು ನಿರಂಕುಶ ಸ್ವಾತಂತ್ರ್ಯವಾದಿ ಎಂದು ಕರೆದುಕೊಂಡಿರುವ ಮಸ್ಕ್, ಇತ್ತೀಚೆಗಷ್ಟೇ ಟ್ವಿಟರ್ ಖರೀದಿಸುವ 44 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದ್ದರು..ಜನವರಿ 6 ರಂದು ಅಮೇರಿಕಾ ರಾಜಧಾನಿಯಲ್ಲಿ ನಡೆದ ಗಲಭೆಯ ನಂತರ ಟ್ರಂಪ್ ಅವರನ್ನು ಟ್ವಿಟರ್ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಯ್ತು..ಇದೀಗ ಟ್ವಿಟರ್ನ ಈ ನಿರ್ಧಾರ ಜನರಲ್ಲಿ ಅವರ ಬಗೆಗಿನ ರಾಜಕೀಯ ಅಭಿಪ್ರಾಯಗಳನ್ನು ಹೆಚ್ಚಿಸಿತು ಎಂದಿರುವ ಎಲಾನ್ ಮಸ್ಕ್, ನೈತಿಕವಾಗಿ ಅದು ತಪ್ಪಾದ ನಿರ್ಧಾರ ಎಂದಿದ್ದಾರೆ.