ಹೇಳಿದ್ರು.
ರಾಮನಗರ ಜಿಲ್ಲೆಯ ಕನಕಪುರ ಪಟ್ಟಣದ ದೇಗುಲ ಮಠಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತಾನಡಿದ್ರು. ಅವರ ಕಾಲ, ಇವರ ಕಾಲದಲ್ಲಿ ಹೀಗಾಗಿತ್ತು ಎಂದು ಉಡಾಫೆ ಹೇಳಿಕೆಯನ್ನ ನಾನು ನೀಡುವುದಿಲ್ಲಾ ಆದ್ರೆ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ, ಬಿಹಾರ ಹಾಗೂ ಬೇರೆ ರಾಜ್ಯದ ಕಾನೂನು ನಮ್ಮಲ್ಲಿಯೂ ಜಾರಿಯಾಗಲಿದೆ, ಇಂತಹ ಪ್ರಕರಣದಲ್ಲಿ ಭಾಗಿಯಾಗುವರಿಗೆ ಕಠಿಣ ಶಿಕ್ಷೆಯಾಗಲಿದೆ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದವರು
ಅಂತಾ ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ರು.
ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದ್ದಾರೆ, ಆದರೆ ಇದು ಪೊಲೀಸ್ ಇಲಾಖೆ ವೈಫಲ್ಯ ಎಂದು ಹೇಳಲಾಗಲ್ಲ, ಯಾರ್ಯಾರ ಕಾಲದಲ್ಲಿ ಏನಾಯ್ತು ಎಂದು ನಾನು ಹೇಳಲ್ಲ, ಮುಂದಿನ ಯುವಪೀಳಿಗೆಯ ಹಿತದ್ಱಷ್ಟಿಯಿಂದ ಕಠಿಣ ಕಾನೂನು ರೂಪಿಸಲಾಗುತ್ತೆ ಅಂತಾ ಹೇಳಿದ್ರು. ಇನ್ನೂ ಮಹಿಳೆಯರ ರಕ್ಷಣೆಗೆ ರಿವಾಲ್ವಾರ್ ಇಟ್ಟುಕೊಳ್ಳಲು ಅವಕಾಶ ಕೊಡಿ ಎಂಬ ಆನಂದ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿ ಅವಶ್ಯಕತೆ ಇರುವವರು ಕಾನೂನು ವ್ಯಾಪ್ತಿಯಲ್ಲಿ ಇಟ್ಟುಕೊಳ್ಳಬಹುದು, ಆದರೆ ಸರ್ಕಾರ ಸಹ ಜನರ ಹಿತಕ್ಕಾಗಿ ಕೆಲಸ ಮಾಡಲಿದೆ ಅಂತಾ ಹೇಳಿದ್ರು.
ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಬಹಳ ಸರಳ ಸಜ್ಜನಿಕೆಯ ವ್ಯಕ್ತಿ ಅವರು 3-4 ಬಾರಿ ಶಾಸಕರಾಗಿದ್ದಾರೆ. ಇದೀಗ ಮೊದಲ ಬಾರಿಗೆ ಮಂತ್ರಿಯ ಆಗಿದ್ದಾರೆ ಸಣ್ಣಪುಟ್ಟ ಹೇಳಿಕೆಗಳನ್ನ ದೊಡ್ಡದು ಮಾಡಬಾರದು ಅಂತಾ ಗೃಹ ಸಚಿವರ ಹೇಳಿಕೆಗಳನ್ನ ಸೋಮಣ್ಣ ಸಮರ್ಥಿಸಿಕೊಂಡ್ರು.