ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ಎಂಟ್ರಿ

ಮಂಗಳವಾರ, 30 ನವೆಂಬರ್ 2021 (15:30 IST)
ಬೆಂಗಳೂರು ಹೊರವಲಯದ ನಂದಿಬೆಟ್ಟಕ್ಕೆ ಪ್ರವಾಸಿಗರು ಇನ್ನು ಮುಂದೆ ಭೇಟಿ ನೀಡಬಹುದಾಗಿದೆ.
 
ನಂದಿಬೆಟ್ಟಕ್ಕೆ ಭೇಟಿ ನೀಡಲು ನಾಳೆಯಿಂದ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಕಳೆದ ಮೂರು ತಿಂಗಳಿಂದ ಪ್ರವಾಸಿಗರಿಗೆ ಬಾಗಿಲು ಮುಚ್ಚಿದ್ದ ಪ್ರವಾಸಿ ತಾಣ ಬಾಗಿಲು ತೆರೆದಿದೆ.ಆಗಸ್ಟ್ 24ರಂದು ಮಳೆಯಿಂದ ನಂದಿಬೆಟ್ಟದ ಗುಡ್ಡ ಕುಸಿದಿದ್ದರಿಂದ ರಸ್ತೆ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ನಂದಿ ಬೆಟ್ಟ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
 
ರಸ್ತೆ ಕಾಮಗಾರಿ ಪೂರ್ಣವಾದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ. ಆದರೆ ಕೊವಿಡ್ 3ನೇ ಅಲೆ ಹಿನ್ನೆಲೆಯಲ್ಲಿ ನಂದಿಬೆಟ್ಟಕ್ಕೆ ವಿಕೇಂಡ್ ಕರ್ಪ್ಯೂ ಜಾರಿ ಮುಂದುವರಿಯಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ