ಬೆಂಗಳೂರು ಟ್ರಾಫಿಕ್ ಜಾಮ್ನಿಂದ ಶುರುವಾದ ಲವ್ ಸ್ಟೋರಿ. ಈ ಸ್ಟೋರಿಯನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲ ನೆಗಿಟಿವ್ನಲ್ಲೂ ಒಂದು ಪಾಸಿಟಿವ್ ಇದ್ದೇ ಇರುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ ಆಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ರೆಡ್ಡಿಟ್ ಬಳಕೆದಾರನು ತನ್ನ ಪತ್ನಿಯನ್ನು ಮದುವೆಗೂ ಮುನ್ನಾ ಮೊದಲ ಬಾರಿಗೆ ಸೋನಿ ವರ್ಲ್ಡ್ ಸಿಗ್ನಲ್ನಲ್ಲಿ ಭೇಟಿಯಾದರಂತೆ. ಬಳಿಕ ಇಬ್ಬರು ಫ್ರೆಂಡ್ಸ್ ಆದರಂತೆ. ಒಮ್ಮೆ ಆಕೆಯನ್ನು ಡ್ರಾಪ್ ಮಾಡಲು ಹೋದಾಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಈಜಿಪುರ ಫ್ಲೈಓವರ್ನಲ್ಲಿ ಟ್ರಾಫಿಕ್ ಜಾಮ್ನಿಂದ ಸಿಲುಕಿಕೊಂಡರಂತೆ. ಆ ಕ್ಷಣದಲ್ಲಿ ಇಬ್ಬರಿಗೂ, ಒಂದೆಡೆ ಕಿರಿಕಿರಿ ಮತ್ತು ಹಸಿವು ಕೂಡ ಇತ್ತಂತೆ. ಜನನಿಬಿಡ ಏರಿಯಾದಿಂದ ಹೇಗಾದರೂ ಆಚೆ ಬರಬೇಕು ಅಂತಾ ಬೇರೆ ದಾರಿ ಆಯ್ದುಕೊಂಡ ಇಬ್ಬರು, ನಂತರ ಒಟ್ಟಿಗೆ ಹೋಟೆಲ್ ಒಂದಕ್ಕೆ ಊಟಕ್ಕೆ ಹೋದರಂತೆ. ಆ ಕ್ಷಣದಲ್ಲೇ ಇಬ್ಬರ ಲವ್ ಸ್ಟೋರಿ ಆರಂಭವಾಯಿತು ಎಂದು ಹೇಳಿಕೊಂಡಿದ್ದಾರೆ.