ರಾಜ್ಯದಿಂದ ಬಿಹಾರ್, ಉತ್ತರ ಪ್ರದೇಶಕ್ಕೆ ಹೊರಟ ರೈಲು
ರಾಜ್ಯದ ಮಂಗಳೂರಿನಿಂದ ಬಿಹಾರ್ ಹಾಗೂ ಉತ್ತರ ಪ್ರದೇಶಗಳಿಗೆ ರೈಲು ಹೊರಟಿವೆ.
ಬಿಹಾರ ಹಾಗೂ ಉತ್ತರ ಪ್ರದೇಶಗಳ ವಲಸೆ ಕಾರ್ಮಿಕರನ್ನು ಹೊತ್ತ 2 ರೈಲುಗಳು ಮಂಗಳೂರಿನಿಂದ ಹೊರಟಿವೆ.
ಉತ್ತರ ಪ್ರದೇಶಕ್ಕೆ ಹೋಗುವವರಿಗೆ ನಗರದ ಬಂದರ್, ಬೊಂಬಾಯಿ ಹೋಟೆಲ್, ಕಂಡತ್ ಪಳ್ಳಿ, ಕುದ್ರೋಳಿ, ಕಂಕನಾಡಿ, ಉಳ್ಳಾಲ ಹಾಗೂ ಬಿಹಾರಕ್ಕೆ ಹೋಗುವವರಿಗೆ ಪಣಂಬೂರು, ಜೋಕಟ್ಟೆ ಈ ಸ್ಥಳಗಳಿಂದ ವಲಸೆ ಕಾರ್ಮಿಕರನ್ನು ರೈಲು ನಿಲ್ದಾಣಕ್ಕೆ ಕರೆದುಕೊಂಡು ಬರಲು ಸುಮಾರು 23 ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು.