ಬೆಂಗಳೂರು ಉತ್ತರದಲ್ಲಿರುವ 6 ಹಾಸ್ಟೆಲ್ ಗಳನ್ನು ಯಲಹಂಕ ಭಾಗಕ್ಕೆ ವರ್ಗಾವಣೆ ಮಾಡಲು ಸರ್ಕಾರ ಎಕಾಏಕಿ ನಿರ್ಧಾರ ಮಾಡಿದ್ದು ಯಾವುದೇ ರೀತಿಯ ಪೂರ್ವ ಸೂಚನೆ ಇಲ್ಲದೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳನ್ನು ಬಿಟ್ಟು ತೆರಳುವಂತೆ ಸೂಚನೆ ನೀಡುತ್ತಿದ್ದಾರೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ತುಂಬಾ ದೊಡ್ಡ ಮಟ್ಟದಲ್ಲಿ ತೊಂದರೆಯಾಗಲಿದ್ದು ಇದನ್ನು ಪ್ರಶ್ನಿಸಿ ಕಳೆದ ಒಂದು ವಾರದಿಂದ ತಮ್ಮ ತರಗತಿಗಳಿಗೂ ತೆರಳದೆ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದಾರೆ ಆದರೂ ಯಾವೊಬ್ಬರೂ ಇವರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ.
ಸರ್ಕಾರದ ಈ ನಿರ್ಧಾರದಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜಿನಿಂದ ಹಾಸ್ಟೆಲ್ ವರೆಗಿನ ದೂರ ದುಪ್ಪಟ್ಟು ಆಗಿ ಸುಮಾರು 60 ಕಿಲೋಮೀಟರ್ ಬೀಳಲಿದೆ ಜೊತೆಗೆ ಹಳ್ಳಿ ಭಾಗದಲ್ಲಿರುವ ಈ ಸ್ಥಳಾಂತರಿತ ಹಾಸ್ಟೆಲ್ ಗಳಿಗೆ ಸರಿಯಾಗಿ ಬಸ್ ಸೇವೆಯೂ ಇಲ್ಲ ವಿದ್ಯಾರ್ಥಿಗಳು ಬಸ್ ಸ್ಟಾಪ್ ನಿಂದ 3 ಕಿಲೋಮೀಟರಿನಷ್ಟು ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷ ಮುಗಿಯುವವರೆಗೆ ಸಮಯಾವಕಾಶ ನೀಡಿ ಎಂದರು ಕಟುಕ ಅಧಿಕಾರಿಗಳು ಇದಕ್ಕೆಲ್ಲ ಆಸ್ಪದ ನೀಡುತ್ತಿಲ್ಲ. ಮಾನ್ಯ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರಲ್ಲಿ ಇದರ ಬಗ್ಗೆ ನಿವೇದನೆ ಮಾಡಿಕೊಂಡರೂ ಯಾವ ಪ್ರಯೋಜನವೂ ಆಗಲಿಲ್ಲ.