ನಾಳೆ ಸಾರಿಗೆ ನೌಕರರ ಮುಷ್ಕರ

ಸೋಮವಾರ, 13 ಡಿಸೆಂಬರ್ 2021 (16:41 IST)
ಡಿ.13- 2020 ಮತ್ತು 21ನೇ ಸಾಲಿನಲ್ಲಿ ರಾಜ್ಯಾದ್ಯಂತ ಮುಷ್ಕರ ಮಾಡಿ ಕರ್ನಾಟಕ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದ್ದಾವು, ಆದರೆ, ಅವುಗಳಿಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ.ಡಿ.28ರಂದು ರಾಜ್ಯಾದ್ಯಂತ ಧರಣಿ ಮಾಡಲು ನಿರ್ಧರಿಸಿದ್ದೇವೆ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಜಯ ದೇವರಾಜ ಅರಸು ಸರ್ಕಾರವನ್ನು ಎಚ್ಚರಿಸಿದ್ದಾರೆ.
 
ಪ್ರೆಸ್‍ಕ್ಲಬ್‍ನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆಗಳಾದ ಆರನೇ ವೇತನ ಪರಿಷ್ಕರಣೆ, ಮುಷ್ಕರದ ಸಮಯದಲ್ಲಿ ವಜಾಗೊಳಿಸಿದ್ದ ಕಾರ್ಮಿಕರನ್ನು ಪುರ್ನ ನಿಯೋಜಿಸುವುದು, ಅರ್ಧ ವೇತನ ಪಾವತಿಯನ್ನು ನಿಲ್ಲಿಸಿ ಪೂರ್ಣಪ್ರಮಾಣದ ವೇತನವನ್ನು ಸರಿಯಾದ ದಿನಾಂಕದಂದು ಕಡ್ಡಾಯವಾಗಿ ಪಾವತಿಸಬೇಕು, ಸರ್ಕಾರ ಸಾರಿಗೆ ನಿಗಮಗಳನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಹೊರಬೇಕು
ಎಂದರು.
 
ಕೋವಿಡ್ ಆಘಾತದಿಂದ ನಿಗಮಗಳು ಹೊರಬರಲು ಅವುಗಳ ಸದ್ಯದ ಸಾಲದ ಮತ್ತು ನಷ್ಟದ ಹೊರೆಯನ್ನು ಸರ್ಕಾರ ಹೊರಬೇಕು, ನಿಗಮದಲ್ಲಿ ಕಾರ್ಮಿಕರ ಶೋಷಣೆ ಹೆಚ್ಚಾಗುತ್ತಿದ್ದು ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಇದನ್ನು ತಡೆಗಟ್ಟಲು ಸರ್ಕಾರ ಪ್ರತ್ಯೇಕ ಸಮಿತಿಯನ್ನು ರಚಿಸಿ ಪರಿಶೀಲಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ