ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಿಧಾನವಾಗಿ ಬಿಗುವು ಕಳೆದುಕೊಳ್ಳುತ್ತಿದೆ. 9 ದಿನ ಪೂರ್ತಿಯಾಗುವಷ್ಟರಲ್ಲಿ ಹೆಚ್ಚಿನ ಬಸ್ ಗಳು ಸಂಚಾರ ಆರಂಭಿಸಿವೆ.
ಆರನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 10 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಸರ್ಕಾರ ಮಾತ್ರ ನೌಕರರ ಪಟ್ಟಿಗೆ ಕಮಕ್ ಕಿಮಕ್ ಎನ್ನುತ್ತಿಲ್ಲ. ಈ ನಡುವೆ ಮುಷ್ಕರದ ಬಿಗುವು ಕಡಿಮೆಯಾಗುತ್ತಿದ್ದು, ಒಂದೊಂದೇ ಬಸ್ ಗಳು ಸಂಚಾರ ಆರಂಭಿಸಲಾರಂಭಿಸಿವೆ.
ಈಗಾಗಲೇ ಸರ್ಕಾರ ನೌಕರರ ಮೇಲೆ ವಜಾ ಅಸ್ತ್ರ ಜಾರಿಗೊಳಿಸಿದೆ. ಇದಕ್ಕೆ ಬೆದರಿದ ಕೆಲವರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದರೊಂದಿಗೆ ನಿಧಾನವಾಗಿ ಮತ್ತೆ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರುತ್ತಿದೆ.