ಸಾರಿಗೆ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರದ ಚಿಂತನೆ

ಭಾನುವಾರ, 11 ಏಪ್ರಿಲ್ 2021 (09:27 IST)
ಬೆಂಗಳೂರು: ತೆಲಂಗಾಣ ಮಾದರಿಯಲ್ಲಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ತೆಲಂಗಾಣ ಮಾದರಿಯಲ್ಲೇ ತಿರುಗೇಟು ಕೊಡಲು ಸರ್ಕಾರ ಚಿಂತನೆ ನಡೆಸಿದೆ.


ಸರ್ಕಾರ ಈ ಕ್ರಮಕ್ಕೆ ಮುಂದಾದರೆ ಸಾರಿಗೆ ನಿಗಮಗಳ ಖಾಯಂ ನೌಕರರಿಗೂ ವಜಾ ಶಿಕ್ಷೆ ಸಿಗುವ ಸಾಧ‍್ಯತೆಯಿದೆ. ಈಗಾಗಲೇ ತರಬೇತಿ ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಇನ್ನೀಗ ಖಾಯಂ ನೌಕರರಿಗೂ ವಜಾ ಶಿಕ್ಷೆಯ ಬಿಸಿ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ.

ಸರ್ಕಾರದ ವಜಾ ಅಸ್ತ್ರಕ್ಕೆ ಬೆದರಿ ಕೆಲವರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ತೆಲಂಗಾಣದಲ್ಲಿ ಈ ಹಿಂದೆ ಈ ರೀತಿ ಅನಿರ್ದಾಷ್ಟವಧಿ ಮುಷ್ಕರ ನಡೆಸಿದ್ದಕ್ಕೆ ಸಾವಿರಾರು ಖಾಯಂ ನೌಕರರನ್ನು ಸರ್ಕಾರ ಏಕಕಾಲಕ್ಕೆ ವಜಾ ಮಾಡಿತ್ತು. ಇಲ್ಲಿಯೂ ಅದೇ ಅಸ್ತ್ರ ಬಳಸಲು ಸರ್ಕಾರ ಚಿಂತನೆ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ