ಅರಣ್ಯ ಸಂರಕ್ಷಣೆ ಅಧಿಕಾರಿಗಳೇ ಮರಗಳನ್ನು ಹನನ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ಸಾಮಾಜಿಕ ಅರಣ್ಯ ವಿಭಾಗದ ಉಪಾರಣ್ಯ ಸಂರಕ್ಷಣಾಧಿಕಾರಿಯಾದ ಹೆಚ್.ಪೂರ್ಣಿಮಾ ಎಂಬುವರಿಗೆ ವಾಸಮಾಡಲು ವಸತಿಗೃಹ ನಿರ್ಮಾಣಕ್ಕೆ ಮಡಿಕೇರಿ ಅರಣ್ಯ ಇಲಾಖೆಯಿಂದ ಸೂಚಿಸಲಾಗಿತ್ತು. ಇದಕ್ಕಾಗಿ 20 ವರ್ಷಗಳಿಂದ ದಟ್ಟವಾಗಿ ಬೆಳೆದ ಪೈನೆಸ್, ನಂದಿ, ಹೆಬ್ಬಲಸು ಮರಗಳನ್ನು ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅಧಿಕಾರಿಯಾದ ಮಯೂರ ಕರ್ವೆಕರ್ ಮುಂದಾಳತ್ವದಲ್ಲಿ ಕೆಡಿಸಿ ತಮಗೆ ಬೇಕಾದ ವಸತಿ ಗೃಹ ನಿರ್ಮಾಣ ಮಾಡಲು ಸ್ಥಳವನ್ನು ಸಿದ್ಧಪಡಿಸಿ ಕೊಂಡಿರುವುದಾಗಿ ವರದಿಯಾಗಿದೆ.