ಚಿಕ್ಕಬಳ್ಳಾಪುರದಲ್ಲಿ ನಡುಗಿದ ಭೂಮಿ: ಎರಡು ಬಾರಿ ಭೂಕಂಪನದ ಅನುಭವ

ಬುಧವಾರ, 22 ಡಿಸೆಂಬರ್ 2021 (20:31 IST)
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು, ಭೋಗಪರ್ತಿ ಗ್ರಾಮಗಳ ಸುತ್ತಮುತ್ತ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ 2.9 ಹಾಗೂ 3.3 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಎಸ್‌ಸಿ) ತಿಳಿಸಿದೆ.
ಎರಡು ಭಾರಿ ಕಂಪಿಸಿದ ಭೂಮಿ
ಜಿಲ್ಲೆಯ ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿ, ಬೋಗೇನಹಳ್ಳಿ, ಭೋಗಪರ್ತಿ, ಹೊಸಹಳ್ಳಿ, ದೊಡ್ಡ ಹಳ್ಳಿ ಮುಂತಾದ ಕಡೆ ಎರಡು ಬಾರಿ ಲಘು ಭೂಕಂಪನ ಉಂಟಾಗಿದೆ ಎಂದು ವರದಿಯಾಗಿದೆ. ಭೂಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಆತಂಕದಲ್ಲಿ ಸಾರ್ವಜನಿಕರು
ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವು ಭಾರಿ ಭೂಮಿ ಕಂಪಿಸಿದ ಅನುಭವ ಆಗುತ್ತಿದೆ. ಇದಕೆಲ್ಲ ಕಲ್ಲು, ಗಣಿಗಾರಿಕೆ, ಅಥವಾ ಬಾಂಬ್ ಬ್ಲಾಸ್ಟಿಂಗ್ ಮಾಡುವುದು ಸಮಸ್ಯೆ ಆಗಿರಬಹುದೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರದಾಡುತ್ತಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತವಾಗಿ ಪರಿಶೀಲಿಸಿ ಕ್ರಮ ವಹಿಸಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ