ಯುದ್ಧ ಹಡಗುಗಳಿಂದ ಕೊರೊನಾ ವಾರಿಯರ್ಸ್ ಗೆ ಗೌರವ

ಸೋಮವಾರ, 4 ಮೇ 2020 (17:54 IST)
ಯುದ್ಧ ಹಡಗುಗಳು ಕೊರೊನಾ ವಾರಿಯರ್ಸ್ ಗೆ ವಿನೂತನ ಗೌರವ ಸಲ್ಲಿಸಿವೆ.

ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ನೀಡುವ ಸಲುವಾಗಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಐಎನ್‌ಎಸ್ ಕೊಸ್ವಾರಿ ಯುದ್ಧ ಹಡಗುಗಳನ್ನು ಬೆಳಕಿನಿಂದ ಅಲಂಕರಿಸಲಾಗಿತ್ತು.

ನೌಕಾನೆಲೆಯ ಸಮೀಪದ ಅರಬ್ಬೀ ಸಮುದ್ರದಲ್ಲಿ ಸಂಜೆ 7 ರಿಂದ ರಾತ್ರಿ 11 ಗಂಟೆಯವರೆಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್, ಕೊರೊನಾ ವಾರಿಯರ್ಸ್  ಬಗ್ಗೆ ನಮಗೆ ಹೆಮ್ಮೆ ಇದೆ. ದೇಶದ ನಾಗರೀಕರ ಪರವಾಗಿ ಕೊರೊನಾ ವಾರಿಯರ್ಸ್ ಗಳ ತ್ಯಾಗಕ್ಕೆ ವಂದಿಸುತ್ತೇವೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ