ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ?

ಶನಿವಾರ, 24 ಮಾರ್ಚ್ 2018 (19:18 IST)
ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಮತ್ತು  ಜೆಡಿಎಸ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆಗಿದ್ದು 1೦ ಕೋಟಿ ಡೀಲ್‌ ನಡೆದಿದೆಯೆನ್ನುವ ಶಾಸಕ ಸುರೇಶ್ ಗೌಡ ಆರೋಪಕ್ಕೆ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಶಾಸಕ ಸುರೇಶ್ ಗೌಡ ವಿರುದ್ದ ಹರಿಹಾಯ್ದ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ, ಕೂಡಲೇ ಹೇಳಿಕೆ ವಾಪಾಸ್ಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
 
ವೀಕ್ ಕ್ಯಾಂಡೇಟ್ ಹಾಕಲು ತುಮಕೂರು ಸಂಸದ ಮುದ್ದಹನುಮೇಗೌಡ ಹಾಗೂ ಜಿ. ಪರಮೇಶ್ವರ್, ಮಾಜಿ ಸಚಿವ ಜೆಡಿಎಸ್‌ನ  ಚೆನ್ನಿಗಪ್ಪ ಅವರಿಂದ 10 ಕೋಟಿ ಪಡೆದಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ‌ ಸುರೇಶ್ ಗೌಡ ಆರೋಪಿಸಿದ್ದರು.
 
ಇದೆಲ್ಲಾ ಸುರೇಶ್ ಗೌಡ ಅವರು ಸೋಲುವ ಭೀತಿಯಿಂದ ಮಾಡಿರುವ ಆರೋಪ. ಅದು ಬಿಜೆಪಿ ಸಂಸ್ಕೃತಿ, ನಮಗೆ ಗ್ರಾಮಾಂತರದಲ್ಲಿ ಜೆಡಿಎಸ್ ಪ್ರತಿಸ್ಪರ್ಧಿ. ಪಕ್ಷದ ಹಾಗೂ ಆರ್ ಎಸ್ ಎಸ್ ನಾಯಕರ ಬಗ್ಗೆಯೂ ಸುರೇಶ್ ಗೌಡ ಹಿಂದೆ ಮಾತನಾಡಿದ್ದರು ಎಂದು ತಿರುಗೇಟು ನೀಡಿದ್ದಾರೆ.
 
ಗುಬ್ಬಿ ಶಾಸಕ ವಾಸು ಅವರನ್ನು ಬಿಜೆಪಿ ಪಕ್ಷಕ್ಕೆ ಕರೆತರಲು ವಾಸು ಅವರಿಗೆ ಆಫರ್ ಕೊಟ್ಟಿದ್ರು. ಇಂತಹದ್ದೆಲ್ಲಾ ಸುರೇಶ್ ಗೌಡ್ರ ಚಾಳಿ, ಕಾಂಗ್ರೆಸ್ ಪಕ್ಷದ್ದಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ