ವಿಜಯಪುರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ರಾಗಿಂಗ್ ಪ್ರಕರಣಕ್ಕೆ ಟ್ವಿಸ್ಟ್

Krishnaveni K

ಗುರುವಾರ, 20 ಫೆಬ್ರವರಿ 2025 (11:09 IST)
ವಿಜಯಪುರ: ಮೆಡಿಕಲ್ ಕಾಲೇಜಿನಲ್ಲಿ ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿಗೆ ರಾಗಿಂಗ್ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಘಟನೆ ಬಗ್ಗೆ ಸಿಎಂ ಮತ್ತು ಪ್ರಧಾನಿಗೆ ಟ್ವೀಟ್ ಮೂಲಕ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

ವಿಜಯಪುರ ಜಿಲ್ಲೆ ತಿಕೋಟಾ ಅಲ್ ಅಮೀನಾ ವೈದ್ಯಕೀಯ ಕಾಲೇಜಿನಲ್ಲಿ ಫೆಬ್ರವರಿ 18 ರಂದು ಜಮ್ಮು ಕಾಶ್ಮೀರ ಮೂಲದ ಹಮೀಮ್ ಎಂಬ ವಿದ್ಯಾರ್ಥಿ ಮೇಲೆ ಐವರು ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ಆವತ್ತು ಕ್ರಿಕೆಟ್ ಪಂದ್ಯ ಮುಗಿಸಿ ರೂಂಗೆ ತೆರಳಿದಾಗ ಹಾಡು ಹಾಡು, ಡ್ಯಾನ್ಸ್ ಮಾಡು ಎಂದು ಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿ ಹಮೀಮ್ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯಗೂ ಟ್ವೀಟ್ ಮಾಡಿ ದೂರು ನೀಡಿದ್ದ.

ಘಟನೆ ಸಂಬಂಧ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು, ಕಾಲೇಜು ಆಡಳಿತ ಮಂಡಳಿ ಮಾತ್ರ ರಾಗಿಂಗ್ ನಡೆದಿಲ್ಲ ಎನ್ನುತ್ತಿದೆ. ನಮ್ಮಲ್ಲಿ ಇದುವರೆಗೆ ಅಂತಹ ಘಟನೆ ನಡೆದಿಲ್ಲ. ಏನೋ ಕ್ರಿಕೆಟ್ ಆಡುವ ವಿಚಾರಕ್ಕೆ ಗಲಾಟೆ ಆಗಿರಬೇಕು ಎಂದು ತಿಪ್ಪೇ ಸಾರುವ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ