ಅಂತ್ಯಸಂಸ್ಕಾರಕ್ಕೆಂದು ಜಾಗ ನೀಡಿದ್ದ ಹಿಂದೂ ಕುಟುಂಬ: ಇಡೀ ಆಸ್ತಿ ತನ್ನದು ಎಂದು ನೋಟಿಸ್ ನೀಡಿದ ವಕ್ಫ್

Krishnaveni K

ಬುಧವಾರ, 30 ಅಕ್ಟೋಬರ್ 2024 (14:00 IST)
ವಿಜಯಪುರ: ಅಂತ್ಯಸಂಸ್ಕಾರೆಂದು ಮಾನವೀಯತೆಯ ದೃಷ್ಟಿಯಿಂದ ಜಾಗ ನೀಡಿದ್ದ ವಿಜಯಪುರದ ಹಿಂದೂ ಕುಟುಂಬಕ್ಕೆ ಈಗ ಇಡೀ ಆಸ್ತಿಯೇ ತನ್ನದು ಎಂದು ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಹೊನ್ನುಟಗಿ ಗ್ರಾಮದ ಸುರೇಶ್ ತೆರದಾಳ್ ಹಾಗೂ ಕುಟುಂಬಸ್ಥರು ಮುಸ್ಲಿಮ್ ಸಮುದಾಯದವರಿಗೆ ಅಂತ್ಯಸಂಸ್ಕಾರಕ್ಕೆಂದು ತುಸು ಜಾಗ ನೀಡಿದ್ದರು. ಆದರೆ ಇದಕ್ಕೆ ಯಾವುದೇ ದಾಖಲೆ ನೀಡದೇ ಇದ್ದಿದ್ದೇ ಅವರಿಗೆ ಈಗ ಮುಳುವಾಗಿದೆ. ಅಂದು ಮಾನವೀಯತೆಯ ದೃಷ್ಟಿಯಿಂದ ಜಾಗ ನೀಡಿದ್ದಕ್ಕೆ ಈಗ ವಕ್ಫ್ ಬೋರ್ಡ್ ಇಡೀ ಆಸ್ತಿಯೇ ತನ್ನದು ಎಂದು ಹೇಳುತ್ತಿದೆ.

ಸುರೇಶ್ ಅವರದ್ದು 13.8 ಎಕರೆ ತಮ್ಮದು ಎಂದು ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ಸರ್ಕಾರ ಈಗ ರೈತರ ಜಮೀನು ತೆರವುಗೊಳಿಸಲ್ಲ ಎಂದಿದೆ. ಅದೇ ರೀತಿ ನಮ್ಮ ಜಮೀನ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದು ಮಾಡಿರುವುದನ್ನೂ ತೆರವುಗೊಳಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ವಕ್ಫ್ ಆಸ್ತಿ ನೋಟಿಸ್  ವಿಚಾರ ರಾಜ್ಯದಲ್ಲಿ ಈಗ ಭಾರೀ ಸದ್ದು ಮಾಡುತ್ತಿದೆ. ಒಂದೆಡೆ ವಕ್ಫ್ ಸಚಿವ ಜಮೀರ್ ಅಹ್ಮದ್ ದಾನವಾಗಿ ನೀಡಿರುವ ಆಸ್ತಿಯನ್ನಷ್ಟೇ ವಶಪಡಿಸಿಕೊಳ್ಳುತ್ತಿದೆ ಎನ್ನುತ್ತಿದ್ದಾರೆ. ಆದರೆ ಈಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ