ವಕ್ಫ್ ಆಸ್ತಿ ನಿಮ್ಮಪ್ಪಂದಾ ಎಂದು ಕೇಳಿದ್ದ ಜಮೀರ್ ಅಹ್ಮದ್ ಗೆ ಬಸನಗೌಡ ಪಾಟೀಲ್ ಪ್ರತ್ಯುತ್ತರ ಹೀಗಿತ್ತು

Krishnaveni K

ಗುರುವಾರ, 7 ನವೆಂಬರ್ 2024 (14:04 IST)
ವಿಜಯಪುರ: ವಕ್ಫ್ ಆಸ್ತಿ ಏನು ನಿಮ್ಮ ಅಪ್ಪಂದಾ ಸಿಕ್ಕ ಸಿಕ್ಕವರಿಗೆ ಹಂಚಲು ಎಂದು ಕೇಳಿದ್ದ ಸಚಿವ ಜಮೀರ್ ಅಹ್ಮದ್ ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

ವಕ್ಫ್ ಕಾಯ್ದು ನಿರ್ಮೂಲನೆಯಾಗಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರೇ ಈಗ ಜಮೀರ್ ಅಹ್ಮದ್ ವಿರುದ್ಧ ಹೈಕಮಾಂಡ್ ಗೆ ದೂರು ಕೊಟ್ಟಿದ್ದಾರೆ. ಹೀಗೇ ಆದರೆ ಜನ ನಮ್ಮನ್ನು ಉಗೀತಾರೆ ಎಂದು ಅವರೇ ಹೇಳ್ತಾರೆ. ಜಮೀರ್ ಇದು ನಿಮ್ಮ ಅಪ್ಪನ ಆಸ್ತೀನಾ ಕೇಳಿದ್ದ ನಂಗೆ. ಇನ್ನೇನು ಇದು ನಿಮ್ಮ ಅಪ್ಪನ ಆಸ್ತಿನಾ ಎಂದು ಯತ್ನಾಳ್ ತಿರುಗೇಟು ನೀಡಿದ್ದಾರೆ.

ವಕ್ಫ್ ಆಸ್ತಿ ವಿರುದ್ಧದ ನಮ್ಮ ಹೋರಾಟ ಇತಿಹಾಸ ಪುಟ ಸೇರಲಿದೆ. ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಬಿಲ್ ನಿರ್ಣಯಿಸುವಾಗ ನಮ್ಮ ವಿಜಯಪುರ ಉದಾಹರಣೆಯಾಗಿ ನಿಲ್ಲಲಿದೆ. ಇದೊಂದು ಕ್ಯಾನ್ಸರ್ ರೀತಿ. ವಕ್ಫ್ ಹೆಸರಿನಲ್ಲಿ ಆಸ್ತಿ ನುಂಗುವುದು, 2040 ರ ವೇಳೆಗೆ ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿ ಮಾಡುತ್ತೇವೆ ಎಂದು ಹೇಳಿದ್ದಾರಲ್ಲ. ಅದು ಆಗಲು ನಾವು ಬಿಡಬಾರದು, ನಾವು ಒಗ್ಗಟ್ಟಾಗಿ ಹೋರಾಡಬೇಕು ಎಂದು ಯತ್ನಾಳ್ ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ