ಟ್ರಂಪ್ ನ ಸ್ವಂತ ಅಪ್ಲಿಕೇಶನ್ ಆ್ಯಪ್ ಬಿಡುಗಡೆ

ಮಂಗಳವಾರ, 22 ಫೆಬ್ರವರಿ 2022 (06:29 IST)
ವಾಷಿಂಗ್ಟನ್ : ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮೊಟ್ಟ ಮೊದಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ.

ಈ ಮೂಲಕ ಟ್ರಂಪ್ ವರ್ಷದ ಬಳಿಕ ಸಾಮಾಜಿಕ ಮಾಧ್ಯಮ ಜಗತ್ತಿಗೆ ಕಾಲಿಟ್ಟಿದ್ದಾರೆ. ಟ್ರಂಪ್ ಬಿಡುಗಡೆ ಮಾಡಿರುವ ಟ್ರೂಥ್ ಸೋಶಿಯಲ್ ಆ್ಯಪ್ ಹೆಸರೇ ಹೇಳುವಂತೆ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಆ್ಯಪ್ ಆ್ಯಪಲ್ನ ಆ್ಯಪ್ ಸ್ಟೋರ್ನಲ್ಲಿ ಡೌನ್ಲೋಡ್ಗೆ ಲಭ್ಯವಿದೆ.

ಹಿಂಸಾಚಾರ ಪ್ರಚೋದನೆಯ ಸಂದೇಶಗಳನ್ನು ಹಂಚಿಕೊಂಡಿದ್ದ ಆರೋಪದ ಮೇಲೆ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಅಮೆರಿಕ ಮಾಜಿ ಅಧ್ಯಕ್ಷನ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಲಾಗಿತ್ತು.

ಇದೀಗ ತನ್ನದೇ ಸ್ವಂತ ಅಪ್ಲಿಕೇಶನ್ ಅನ್ನು ಹೊರತರುವ ಮೂಲಕ ಸಾಮಾಜಿಕ ಮಾಧ್ಯಮ ಲೋಕಕ್ಕೆ ಮತ್ತೆ ಕಾಲಿಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ