ಒಂದೇ ಏಟಿಗೆ ಎರಡು ಗ್ಯಾರೆಂಟಿ ಢಮಾರ್: ಕಾಂಗ್ರೆಸ್ ನಡೆಯ ವಿರುದ್ಧ ಆರ್‌ ಅಶೋಕ್‌ ಆಕ್ರೋಶ

Sampriya

ಗುರುವಾರ, 21 ನವೆಂಬರ್ 2024 (18:25 IST)
ಬೆಂಗಳೂರು: ಮಾನದಂಡಗಳ ನೆಪದಲ್ಲಿ ದಿಢೀರನೆ ಏಕಾಏಕಿ ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿರುವ ಕಾಂಗ್ರೆಸ್ ಸರ್ಕಾರದ ನಡೆಯ ಹಿಂದೆ ಬಡವರಿಗೆ ಮೋಸ ಮಾಡುವ ದೊಡ್ಡ ಹುನ್ನಾರವೇ ಅಡಗಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.    

ನಾನಾ ಕಾರಣಗಳಿಂದ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದ್ದು, ಇದರಿಂದ ಗೃಹಲಕ್ಷ್ಮಿಗೂ ಕಂಟಕವಾಗುವ ಮುನ್ಸೂಚನೆಯಿದೆ.  ಇದು ಸರ್ಕಾರದ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಪಕ್ಷ ನಾಯಕ ಆರ್‌ ಅಶೋಕ್ ಅವರು ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪೋಸ್ಟ್‌ನಲ್ಲಿ ಹೀಗಿದೆ: ಒಂದೇ ಏಟಿಗೆ ಎರಡು ಗ್ಯಾರೆಂಟಿ ಢಮಾರ್!

ಮಾನದಂಡಗಳ ನೆಪದಲ್ಲಿ ದಿಢೀರನೆ ಏಕಾಏಕಿ ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿರುವ ಕಾಂಗ್ರೆಸ್‌ ಸರ್ಕಾರದ ನಡೆಯ ಹಿಂದೆ ಬಡವರಿಗೆ ಮೋಸ ಮಾಡುವ ದೊಡ್ಡ ಹುನ್ನಾರವೇ ಅಡಗಿದೆ.

ಬಿಪಿಎಲ್ ಕಾರ್ಡು ರದ್ದು ಮಾಡುವ ಮೂಲಕ ಅನ್ನಭಾಗ್ಯದ ಹಣಕ್ಕೆ ಕನ್ನ ಹಾಕುವುದರ ಜೊತೆಗೆ, ಗೃಹಲಕ್ಷ್ಮಿ ಹಣಕ್ಕೂ ಕತ್ತರಿ ಹಾಕಲಿದೆ ಈ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ.

ನುಡಿದಂತೆ ನಡೆದ ಸರ್ಕಾರ ಎನ್ನುವುದು ಕೇವಲ ಬಿಟ್ಟಿ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದು, ನುಡಿಯುವುದು ಒಂದು, ಮಾಡುವುದು ಇನ್ನೊಂದು ಎನ್ನುವುದೇ ಈ ಸರ್ಕಾರದ ನಿಜವಾದ ಅಸಲೀಯತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ