ಹಿಟ್ ಅಂಡ್ ರನ್ ಗೆ ಒಂದೇ ಕುಟುಂಬದ ಇಬ್ಬರು ಸಾವು ಮತ್ತೊರ್ವನ ಸ್ಥಿತಿ ಗಂಭೀರ

ಸೋಮವಾರ, 7 ಆಗಸ್ಟ್ 2023 (16:20 IST)
ಹಿಟ್ ಅಂಡ್ ರನ್ ಗೆ ಒಂದೇ ಕುಟುಂಬದ ಇಬ್ಬರು ಸಾವು ಮತ್ತೊರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಬೆಂಗಳೂರಿನ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಘು ಮತ್ತು ಚಿರಂಜೀವಿ ಮೃತರು... ( ಅಪ್ಪ ಮಗ) 
ವಾಸು(ಅಳಿಯ) ಸ್ಥಿತಿ ಗಂಭೀರವಾಗಿದೆ.ಮೃತರು ಕುವೆಂಪು ನಗರದ ನಿವಾಸಿಗಳಾಗಿದ್ದು,ಒಂದೇ ಕುಟುಂಬದ ಮೂವರು ಪುಸ್ತಕದ ವ್ಯಾಪಾರ ಮಾಡ್ತಿದ್ರು.ಕಳೆದ ರಾತ್ರಿ  ಕೆಲಸ ಮುಗಿಸಿ ವಾಪಸ್ಸು ಬರುವಾಗ ಘಟನೆ ನಡೆದಿದೆ.
 
ಮಾರುತಿ ಇಕೋ ಕಾರಿನಿಂದ ಹಿಟ್ ಅಂಡ್ ರನ್ ಸಂಭವಿಸಿದೆ.ಎಂಎಸ್ ರಾಮಯ್ಯ ಅಸ್ಪತ್ರೆ ಕಡೆಯಿಂದ ಇಕೋ ಕಾರು ನಿಂತಿದ್ದು,ಮೊದಲು ನಿಂತಿದ್ದ ಒಂದು ಕಾರು ಮತ್ತೊಂದು ಆಟೋಗೆ ಡಿಕ್ಕಿ ಹೊಡೆದಿದೆ.ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಮೊದಲು ಡಿಕ್ಕಿ ಹೊಡೆದು ಬಳಿಕ ಡಿಯೋ ಸ್ಕೂಟರ್ ನಲ್ಲಿದ್ದ ಇಬ್ಬರಿಗೆ  ಡಿಕ್ಕಿ ಹೊಡೆದಿದೆ.ಘಟನೆ ಬಳಿಕ  ಕಾರು ತಡೆದು ಸ್ಥಳೀಯರು ನಿಲ್ಲಿಸಿದ್ದಾರೆ.ನಂತ್ರ  ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಕಾರಿನ ಸಹಿತ  ಎಸ್ಕೇಪ್ ಆಗಿದ್ದು,ಸದ್ಯ ಕಾರಿನಲ್ಲಿದ್ದ  ಆಕಾಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಾಗಡಿ ಜಿಲ್ಲಾ ಪಂಚಾಯತಿ ಸದಸ್ಯರ ಮಗ ಎಂದು ಆಕಾಶ್ ಹೇಳ್ತಿದ್ದು,ಕುಡಿದ ಮತ್ತಿನಲ್ಲಿದ್ದ ಆಕಾಶ್ ವಾಹನ ಚಾಲಯಿಸಿರುವ ಶಂಕೆ ವ್ಯಕ್ತವಾಗಿದ್ದು,ಘಟನೆ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ