ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಎರಡು ವರ್ಷದ ಕಂದ ದುರ್ಮರಣ

ಬುಧವಾರ, 19 ಏಪ್ರಿಲ್ 2023 (15:00 IST)
ಆ ದಂಪತಿ ತಮ್ಮ ಮಕ್ಕಳನ್ನ ಚೆನ್ನಾಗಿ ಓದಿಸಬೇಕು. ಅವ್ರನ್ನ ಸುಖವಾಗಿ ಸಾಜಬೇಕು ಅಂತ ಸಾವಿರ ಕನಸು ಕಟ್ಟಿಕೊಂಡ ದೂರದ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ರು. ಮಗುವಿನ ಬಗ್ಗೆ ಸಾವಿರ‌ ಕನಸು ಕಂಡಿದ್ದ ಹನುಮಾನ್ ದಂಪತಿ ಬಾಳಲ್ಲಿ ವಿಧಿಯಾಟ ಬೇರೆಯಾಗಿದೆ.
 
ಎಮ್ಮೆ  ಚರ್ಮದ ಅಧಿಕಾರಿಗಳ‌ ನಿರ್ಲಕ್ಷ್ಯ ಕ್ಕೆ ಹನುಮಾನ್ ಪುತ್ರ ಎರುಡುವರೆ ವರ್ಷದ ಕಾರ್ತಿಕ್ ಬಲಿಯಾಗಿರೋ ಘಟನೆನೆ ಬ್ಯಾಡರಹಳ್ಳಿ ಠಾಣ ವ್ಯಾಪ್ತಿಯ ಗೊಲ್ಲರಹಟ್ಟಿ ಪೈಪ್ ಲೇನ್ ನಲ್ಲಿ ನಡೆದಿದೆ.
 
BWSSBಯ ಅರೆಬರೆ ಕಾಮಗಾರಿಗೆ ಎರಡುವರೆ ವರ್ಷದ ಕಾರ್ತಿಕ್ ಬಲಿಯಾಗಿದ್ದಾನೆ. ಕಾಮಗಾರಿ ಹೆಸ್ರಲ್ಲಿ ತೆಗೆದಿದ್ದ ಹೊಂಡಕ್ಕೆ ಇಂದು ಬೆಳಿಗ್ಗೆ  ಮಗು ಆಟ ಆಡ್ತಾ ಹೋಗಿ ಬಿದ್ದು ಸಾವನ್ನಪ್ಪಿದೆ. ಗುಂಡಿ ತೆಗೆದು ತಿಂಗಳು ಕಳೆದ್ರು ಅಧಿಕಾರಿಗಳು ಇತ್ತ ಗಮಗ ಹರಿಸಿಲಲ್ಲ.‌ಕನಿಷ್ಠ ಗುಂಡಿ ಸುತ್ತ ತಡೆಗೋಡೆ ನಿರ್ಮಿಸೋ ಗೋಜಿಗೂ ಹೋಗದಿರುವುದು ದುರಂತಕ್ಕೆ ಕಾರಣವಾಗಿದೆ. ಸದ್ಯ ಮಗು ಸಾವಿಗೆ ಕಾರಣರಾದ BWSSB ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಆದ್ರೆ ಈ ಅಧಿಕಾರಿಗಳು ಎಚ್ಚರಿಕೆ ವಹಿಸಲು ಒಂದು ಪ್ರಾಣ ಹೋಗಬೇಕಾ ಅನ್ನೋದು ದುರಂತ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ