ಪಾರ್ಟಿ ಮುಗಿಸಿ ಬರುತ್ತಿದ್ದ ಮಹಿಳೆ ಮೇಲೆ ಉಬರ್ ಚಾಲಕನಿಂದ ಮಾನಭಂಗ
ಸ್ನೇಹಿತರ ಮನೆಯಲ್ಲಿ ಪಾರ್ಟಿ ಮುಗಿಸಿ ಉಬರ್ ಕ್ಯಾಬ್ ನಲ್ಲಿ ಮಹಿಳೆ ಮನೆಗೆ ಹೊರಟಿದ್ದಳು. ಇನ್ನೇನು ಮನೆ ತಲುಪಿತು ಎನ್ನುವಾಗ ಕಾರಿನ ಡೋರ್ ಲಾಕ್ ಮಾಡಿಕೊಂಡ ಆರೋಪಿ ಚಾಲಕ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಕೃತ್ಯವೆಸಗಿದ ಬಳಿಕ ಮಹಿಳೆಯನ್ನು ಕಾರಿನಿಂದ ಹೊರ ಹಾಕಿದ್ದಾನೆ. ಆದರೆ ಈ ಗಲಾಟೆಯ ನಡುವೆ ಮಹಿಳೆ ಆರೋಪಿಯ ಮೊಬೈಲ್ ಕಸಿದುಕೊಂಡಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ.