ಉದ್ಯಾನನಗರಿ ತುಂಬೆಲ್ಲಾ ತ್ರಿವರ್ಣ ಧ್ವಜಗಳದ್ದೆ ಕಲರವ
ನಮ್ಮ ಭಾರತವು ಹಲವು ಹೋರಾಟಗಾರರ ಪರಿಶ್ರಮದ ಫಲದಿಂದ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, 76 ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯ ರಾಜಧಾನಿ ಸಜ್ಜಾಗಿದೆ.ಈಗಾಗಲೇ ಎಲ್ಲೆಡೆ ತ್ರಿವರ್ಣ ಧ್ವಜಗಳ ಮಾರಾಟ ಶುರುವಾಗಿದ್ದು, ರಸ್ತೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ತ್ರಿವರ್ಣ ಧ್ವಜದ ಮಾರಾಟ ಭರದಿಂದ ಸಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಬೆಲೆ ಏರಿಕೆಯಾಗಿದ್ದರೂ ಸಹ ಜನರು ತ್ರಿವರ್ಣ ಧ್ವಜ, ಬ್ಯಾಡ್ಜ್ ಹಾಗೂ ಟೀ ಶರ್ಟ್ಗಳನ್ನು ಖರೀದಿಸಿ ನಾಳಿನ ಹಬ್ಬವನ್ನು ಆಚರಿಸಲು ಸಿದ್ದರಾಗಿದ್ದಾರೆ. ಇನ್ನೂ ಈಗಾಗಲೇ ನಗರದ ತುಂಬೆಲ್ಲಾ ತ್ರಿವರ್ಣ ದ್ವಜಗಳು ಹಾರಡುತ್ತಿದ್ದು ಕಣ್ಣ ಹಾಯಿಸದಷ್ಟು ದೂರಕ್ಕು ದೇಶದ ಹೆಮ್ಮೆ , ಪ್ರತೀಕಾವಾಗಿರುವ ತ್ರಿವರ್ಣ ದ್ವಜಗಳು ಕಾಣಿಸುತ್ತಿದೆ.