6 ನೇ ಸ್ವತಂತ್ರ್ಯ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು,ಈ ಬೆನ್ನಲ್ಲೇ ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.ನಗರದ ತುಂಬಾ ಕೇಸರಿ,ಬಿಳಿ, ಹಸಿರು ರಾರಾಜಿಸುತ್ತಿದೆ.ಪ್ರಧಾನಿ ಮೋದಿ ಘೋಷಿಸಿರೋ ಹರ್ ಗರ್ ತಿರಂಗಾ ಕಾರ್ಯಕ್ರಮ ಯಶಸ್ವಿಗೆ ಪಾಲಿಕೆ ಪಣ ತೊಟ್ಟಿದೆ.
ನಗರದ ವ್ಯಾಪ್ತಿಯಲ್ಲಿ ಒಟ್ಟು 15 ಲಕ್ಷ ಧ್ವಜ ಹಾರಿಸಲು ಪಾಲಿಕೆ ಪ್ಲಾನ್ ನಡೆಸಿದ್ದು,ಈಗಾಲೇ 10 ಲಕ್ಷ ಧ್ವಜ ಪಾಲಿಕೆ ತರಿಸಿಕೊಂಡಿದೆ.ಮನೆ ,,ಮನೆಗಳಲ್ಲಿ ಈ ಬಾರಿ ರಾಷ್ಟ್ರಧ್ವಜ ಹಾರಾಡಲಿದೆ.ದೇವಸ್ಥಾನ, ಮದರಸಾ, ಮಸೀದಿಗಳಲ್ಲಿಯು ಈ ಬಾರಿಯು ರಾಷ್ಟ್ರ ಧ್ವಜ ಹಾರಟ ಫಿಕ್ಸ್ ಆಗಿದೆ.ಎಲ್ಲಾ ಶಾಲೆ, ಕಾಲೇಜು, ಮದರಸಾಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಶಿಕ್ಷಣ ಇಲಾಖೆ ಆದೇಶ ಮಾಡಿದೆ.ಈ ಬಾರಿ ಪಾಲಿಕೆ ವತಿಯಿಂದ ಧ್ವಜ ಮಾರಾಟ ಮಾಡಲು ಸಿದ್ದತೆ ನಡೆಸಿದೆ.
ದೊಡ್ಡ ಧ್ವಜಕ್ಕೆ 25 ರೂಪಾಯಿ, ಚಿಕ್ಕ ಧ್ವಜಕ್ಕೆ 10 ರೂಪಾಯಿ ಪಾಲಿಕೆ ನಿಗದಿ ಮಾಡಿದೆ.ಬೆಂಗಳೂರಲ್ಲಿ ಈ ಬಾರಿ 10 ಲಕ್ಷ ಧ್ವಜಾರೋಹಣ ಮಾಡಲು ಟಾರ್ಗೆಟ್ ನೀಡಿದ್ದು,ಸದ್ಯ 10 ಲಕ್ಷ ತಿರಂಗ ತರಿಸಲಾಗಿದೆ ಅಂತಾ ತುಷಾರ್ ಗಿರಿನಾಥ್ ಹೇಳಿದ್ದಾರೆ.ಈ ಬಾರಿ ಪಾಲಿಸ್ಟರ್ ಧ್ವಜಗಳ ಬಳಕೆಯೂ ಅನಿವಾರ್ಯವಾಗಿದೆ.ಪ್ರತಿ ಮನೆ ಮನೆಯಲ್ಲೂ ತಿರಂಗ ಧ್ವಜ ಹಾರಾಡುವ ನಿರೀಕ್ಷೆ ಇದೆ.ಆಡಳಿತ ವಿಭಾಗದ ವಿಶೇಷ ಆಯುಕ್ತನ್ನ ನೂಡಲ್ ಆಫಿಸರ್ ಆಗಿ ನೇಮಕ ಮಾಡಲಾಗುತ್ತೆ.ಇನ್ನು ವಾರ್ಡ್ ಇಂಜಿನಿಯರ್ಸ್, ಎಆರ್ಒ ಗಳು ಬೆಂಗಳೂರಿನ ಗಲ್ಲಿ ಗಲ್ಲಿಗೂ ಹೋಗಿ ಧ್ವಜಾರೋಹಣದ ಬಗ್ಗೆ ಅರಿವು ಮೂಡಿಸಲು ಸಜ್ಜಾಗಿದ್ದಾರೆ.ಇನ್ನು ಜನರು ಹೇಗೆ ಧ್ವಜ ಹಾರಿಸಬೇಕು ಅನ್ನೋ ಬಗ್ಗೆ ಕೂಡ ಇಂದಿನಿಂದ ಜಾಗೃತಿ ಮೂಡಿಸಲು ಪಾಲಿಕೆ ಅಧಿಕಾರಿಗಳ ತಂಡ ಸಜ್ಜಾಗಿದೆ.