ಉಪಚುನಾವಣೆ ಮೂಲಕ ಇಡೀ ರಾಷ್ಟ್ರಕ್ಕೆ ಸಂದೇಶ ನೀಡಲಾಗಿದೆ ಎಂದ ಉಗ್ರಪ್ಪ

ಗುರುವಾರ, 8 ನವೆಂಬರ್ 2018 (17:39 IST)
ಉಪಚುನಾವಣೆಯಲ್ಲಿ ಜಯಗಳಿಸಿದ ಬಳಿಕ ದೇವರ ದರ್ಶನವನ್ನು ವಿ. ಎಸ್. ಉಗ್ರಪ್ಪ ಪಡೆದುಕೊಂಡರು. ಉಪ ಚುನಾವಣೆ ಮೂಲಕ ಇಡೀ ರಾಷ್ಟಕ್ಕೆ ಬಳ್ಳಾರಿ, ರಾಮನಗರ, ಜಮಖಂಡಿ, ಮಂಡ್ಯ ಮತದಾರರರು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದಿದ್ದಾರೆ.
ತುಮಕೂರು ಜಿಲ್ಲೆ ಮದುಗಿರಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಪೂಜೆಗೆ ಮಗನ ಜೋತೆ ದೇವಸ್ಥಾನಕ್ಕೆ ಆಗಮಿಸಿದ್ದ ಉಗ್ರಪ್ಪಪೂಜೆ ಮುಗಿದ ಬಳಿಕ ಮಾದ್ಯಮಗಳಿಗೆ ಹೇಳಿಕೆ ನೀಡಿದರು.

ಬಿಜೆಪಿಯ ಪ್ರವೃತ್ತಿ ಹಾಗೂ ಜನ ವಿರೋಧಿ ನೀತಿಯನ್ನ ಮತದಾರರು ಖಂಡಿಸಿದ್ದಾರೆ. ಬಿಜೆಪಿ ಆಡಳಿತ ಸರಿಯಿಲ್ಲ. ಆಡಳಿತ ನಡೆಸೋದ್ರಲ್ಲಿ ವಿಫಲರಾಗಿದ್ದೀರಿ ಅಂತಾ ಮತದಾರರು ಜಾತ್ಯಾತೀತ ಶಕ್ತಿಗಳಾಗಿರುವ ನಮ್ಮನ್ನು ಗೆಲ್ಲಿಸಿದ್ದಾರೆ.

ಪ್ರಧಾನ ಮಂತ್ರಿ ಸುಳ್ಳು ಹೇಳುವುದರಲ್ಲಿ‌ ನಿಸ್ಸೀಮರಾಗಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ವಿದೇಶದಿಂದ ಕಪ್ಪು ಹಣ ತಂದು ಬಡವರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು 15 ಪೈಸೆ ಹಾಕಿಲ್ಲ.

ರಾಫೆಲ್ ಹಗರಣದಲ್ಲಿ 39000 ಕೋಟಿ ಹಗರಣವನ್ನ ಪ್ರಧಾನಿ ಮೋದಿ, ಬಿಜೆಪಿಯ ಇತರರು ಮಾಡಿ ದೇಶದ ಆರ್ಥಿಕ ಪರಿಸ್ಥಿತಿಯನ್ನ ದಿವಾಳಿತನಕ್ಕೆ ತಂದು ನಿಲ್ಲಿಸಿದ್ದಾರೆ. ಇದನ್ನ ಜನ ಗ್ರಹಿಸಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿಗಳನ್ನು  ಸೋಲಿಸಿ ಕಾಂಗ್ರೇಸ್ -ಜೆಡಿಎಸ್  ಅಭ್ಯರ್ಥಿ ಗಳನ್ನ ಗೆಲ್ಲಿಸಿದ್ದಾರೆ ಎಂದರು.

ತುಮಕೂರಿನ ಮದುಗಿರಿ ಯಲ್ಲಿ ಬಳ್ಳಾರಿ ನೂತನ ಸಂಸದ ವಿ.ಎಸ್. ಉಗ್ರಪ್ಪ ಈ ಹೇಳಿಕೆ‌ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ