ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ನೀಡುವಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಮೇಶ್ ಕತ್ತಿ ನೇರ ನುಡಿಯ ರಾಜಕಾರಣಿ. ಅವರ ಅಗಲಿಕೆಯಿಂದ ಉತ್ತರ ಕರ್ನಾಟಕ ದ ದೊಡ್ಡ ಧ್ವನಿ ಹುದುಗಿ ಹೋಗಿದೆ. ಪ್ರತ್ಯೇಕ ರಾಜ್ಯ ಹೇಳಿಕೆ, ವಿಭಜನೆಯ ಪರ ಅಂತಾ ವಿವಾದವಾಗಿತ್ತು. ಅಭಿವೃದ್ದಿ ವಿಚಾರವಾಗಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದರು ಎಂದರು.
ಬೆಂಗಳೂರಿನ ಆಳುವ ದೊರೆಗಳ ಗಮನ ಸೆಳೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದರು. ಅವರಿಗೆ ಚಾಟಿ ಏಟು ನೀಡಲು ಈ ರೀತಿ ಹೇಳುತ್ತಿದ್ದರು. ನಾವು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೇ. ಕತ್ತಿ ಉತ್ತರ ಕರ್ನಾಟಕದ ಏಳಿಗೆ ಬಯಸುತ್ತಿದ್ದ ನಾಯಕ. ಅವರ ರೀತಿ ನೇರವಾಗಿ ಹೇಳುವ ನಾಯಕ ಮತ್ತೊಬ್ಬ ಸಿಗುವುದಿಲ್ಲ. ಅವರು ಅಭಿವೃದ್ದಿ ವಿಚಾರವಾಗಿ ಯಾರ ಮುಲಾಜಿಗೂ ಒಳಗಾಗದೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು.