ಶ್ರೀಮಂತನೆಂದು ಸುಳ್ಳು ಹೇಳಿದ ಪ್ರಿಯಕರನಿಗೆ ಬಿತ್ತು ಗೂಸಾ

ಶುಕ್ರವಾರ, 23 ಆಗಸ್ಟ್ 2019 (18:43 IST)
ಯುವತಿಯೊಬ್ಬಳು ಯುವಕನಿಗೆ ಹೊಡೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಯುವಕನೊಬ್ಬ ಇನ್ಸ್ಟಾಗ್ರಾಮ್ ಮೂಲಕ ಮಹಿಳೆಯೊಂದಿಗೆ ಪರಿಚಯವಾಗಿದ್ದಾನೆ. ಅವನು ಮಹಿಳೆಯೊಂದಿಗೆ ಮಾತನಾಡುವಾಗಲೆಲ್ಲಾ, ನಾನೊಬ್ಬ ಶ್ರೀಮಂತ ವ್ಯಕ್ತಿ, ಕಾರು, ಬಂಗಲೆ ಮತ್ತು ಲಕ್ಷಾಂತರ ಕೋಟಿ ಹಣವಿದೆ ಎಂದು ಹೇಳಿದ್ದಾನೆ. ಇದನ್ನು ಮಹಿಳೆ ನಂಬಿ ಅವನನ್ನು ಪ್ರೀತಿಸುತ್ತಿದ್ದಳು.
 
ತನ್ನ ಪ್ರಿಯಕರ ತುಂಬಾ ಶ್ರೀಮಂತ ವ್ಯಕ್ತಿ ಎಂದು ತಿಳಿದ ಯುವತಿ, ಪೋಷಕರು ನಿರ್ಧರಿಸಿದ್ದ ವರನೊಂದಿಗಿನ ವಿವಾಹವನ್ನು ತಿರಸ್ಕರಿಸಿ ತಾನು ಪ್ರೀತಿಸುತ್ತಿರುವ ಯುವಕನನ್ನೇ ವಿವಾಹವಾಗುವುದಾಗಿ ತಿಳಿಸಿದ್ದಾಳೆ.
 
ಆದರೆ, ಕೆಲ ದಿನಗಳ ನಂತರ ಪ್ರಿಯಕರನ ಸತ್ಯ ಸಂಗತಿ ಬಹಿರಂಗವಾಗಿದೆ. ಅವನೊಬ್ಬ ಶ್ರೀಮಂತ ವ್ಯಕ್ತಿಯಲ್ಲ ಎನ್ನುವುದು ಯುವತಿಗೆ ಗೊತ್ತಾಗಿದೆ. 
 
ಇದರಿಂದ ಆಕ್ರೋಶಗೊಂಡ ಯುವತಿ ತನ್ನ ಪರಿಚಯದ ಯುವಕರನ್ನು ಪ್ರಿಯಕರನ ಮನೆಗೆ ಕರೆದುಕೊಂಡು ಹೋಗಿ, ಮನಬಂದಂತೆ ಥಳಿಸಿದ್ದಾಳೆ. ಯುವತಿ ವಂಚಕನನ್ನು ಥಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ