ಭ್ರಷ್ಟಾಚಾರದ ಸರ್ಕಾರ ಕೊಡ್ತೇವೆ ಎಂದು ಮೋದಿ ಹೇಳಿದ್ದಾರೆ: ಡಿವಿಎಸ್ ಎಡವಟ್ಟು
ಗುರುವಾರ, 2 ನವೆಂಬರ್ 2017 (14:32 IST)
ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದೀಪ ಬೆಳಗಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್, ಬಿಎಸ್ಆರ್ ಪಕ್ಷದ ಶಾಸಕ ಕುಡುಚಿ ರಾಜೀವ್, ಗಿರಯ್ಯ ಪಾಟೀಲ್ ಅಮಿತ್ ಷಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಅಮಿತ್ ಷಾ ರಾಜ್ಯ ನಾಯಕರ ವಿರುದ್ಧ ಗುಡುಗಿದರು. ಹೀಗಾಗಿ ಕೆಲಕಾಲ ರಾಜ್ಯನಾಯಕರು ದಿಕ್ಕಪಾಲದರು. ವೇದಿಕೆಯಿಂದ ಕೆಳಗಿಳಿದ ಶಾಸಕರು, ಕುರ್ಚಿ ಭರ್ತಿ ಮಾಡಲು ಹರಸಾಹಸ ಪಟ್ಟರು.
ಆದರೆ ಪರಿವರ್ತನಾ ಯಾತ್ರೆ ಉದ್ಘಾಟನೆಗೂ ಬರದೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಂತರ ಕಾಯ್ದುಕೊಂಡರು.
ಇನ್ನು ಇದೇವೇಳೆ ಭಾಷಣ ಮಾಡುತ್ತಿರುವಾಗ ಕೇಂದ್ರ ಸಚಿವ ಸದಾನಂದ ಗೌಡರು ಆತುರಾತುರದ ಭಾಷಣ ಮಾಡಲು ಹೋಗಿ ದೊಡ್ಡ ಎಡವಟ್ಟು ಮಾಡಿಕೊಂಡರು. ಕರ್ನಾಟಕದಿಂದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದ ಅವರು `ಭ್ರಷ್ಟಾಚಾರದ ಸರ್ಕಾರ ಕೊಡ್ತೇವೆ ಎಂದು ಮೋದಿ ಹೇಳಿದ್ರು’ ಎನ್ನುವ ಮೂಲಕ ತಪ್ಪಾಗಿ ಹೇಳಿ ಅಪಹಾಸ್ಯಕ್ಕೀಡಾದರು.
ಸಿದ್ದರಾಮಯ್ಯ ಅವರೇ, ಅಶ್ವಮೇಧ ಕುದುರೆಯನ್ನು ಬಿಟ್ಟಿದ್ದೇವೆ. 2018 ಚುನಾವಣೆಯಲ್ಲಿ ನಿಮ್ಮನ್ನು ಮೈಸೂರಿಗೆ ಕಳುಹಿಸ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.