ಆಶಿಶ್ ಮಿಶ್ರಾ ಅವರ ವಕೀಲರ ಪ್ರಕಾರ, ಆಶೀಶ್ ಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ.
ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ನಾಲ್ವರು ರೈತರು ಹಾಗೂ ಪತ್ರಕರ್ತರ ಮೇಲೆ ಎಸ್ಯುವಿಯನ್ನು ಚಲಾಯಿಸಿ ಸಾಯಿಸಿರುವ ಆರೋಪದಲ್ಲಿ ಆಶೀಶ್ ಮಿಶ್ರಾನನ್ನು ಬಂಧಿಸಲಾಗಿತ್ತು.
ಲಖಿಂಪುರ ಖೇರಿ ನ್ಯಾಯಾಲಯಗಳು ಈ ಹಿಂದೆ ಆಶೀಶ್ ಗೆ ಜಾಮೀನು ತಿರಸ್ಕರಿಸಿದ್ದವು.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಆರಂಭವಾದ ದಿನವೇ ಈ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಏಳು ಹಂತದ ಚುನಾವಣೆ ನಡೆಯಲಿದ್ದು, ನಾಲ್ಕನೇ ಸುತ್ತಿನಲ್ಲಿ ಲಖಿಂಪುರದಲ್ಲಿ ಚುನಾವಣೆ ನಡೆಯಲಿದೆ.