ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಎಫೆಕ್ಟ್ - ಕಂಡಕ್ಟರ್ v/s ಮಹಿಳೆಯರ ಗಲಾಟೆ

geetha

ಶನಿವಾರ, 13 ಜನವರಿ 2024 (14:43 IST)
ಬೆಂಗಳೂರು-ಇಂದಿನಿಂದ ಮೂರು ದಿನಗಳ‌ಕಾಲ‌ ರಜೆ ಹಿನ್ನೆಲೆ ಊರುಗಳತ್ತ  ಬೆಂಗಳೂರು ಮಂದಿ ಮುಖಮಾಡಿದ್ದಾರೆ.ಸಾಲು ಸಾಲು ರಜೆ...ಬ್ಯಾಗು ಹಿಡಿದು ಊರುಗಳಿಗೆ ಜನರು ಹೊರಟ್ಟಿದ್ದು,ಜನರಿಗೆ ತೊಂದರೆಯಾಗಬಾರದೆಂದು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.ಹೆಚ್ಚುವರಿಯಾಗಿ ಬಿಎಂಟಿಸಿ ಸಾರಿಗೆ ಇಲಾಖೆ ವ್ಯವಸ್ಥೆ ಮಾಡಿದೆ.
 
ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಎಫೆಕ್ಟ್ ನಿಂದ ಕಂಡಕ್ಟರ್ v/s ಮಹಿಳೆಯರ ಗಲಾಟೆ ನಿಂತಿಲ್ಲ.ಆಧಾರ್ ಕಾರ್ಡ್ ತೋರಿಸಲು  ಮಹಿಳೆಯರು ನಕಾರ ಮಾಡಿದ್ದಾರೆ.ಆಧಾರ್ ಕಾರ್ಡ್ ತೋರಿಸಿಲ್ಲ ಅಂದ್ರೆ ಟಿಕೆಟ್ ನೀಡಲ್ಲ ಎಂದು ಕಂಡಕ್ಟರ್ ಹೇಳ್ತಿದ್ದಾರೆ.ಎಲ್ಲರ ಆಧಾರ್ ಕಾರ್ಡ್ ನೀವು ನೋಡಿ ಆಮೇಲೆ ನನ್ನ ಆಧಾರ್ ಕಾರ್ಡ್ ತೋರಿಸುತ್ತೇನೆ ಎಂದು ಮಹಿಳೆ ಕಂಡಕ್ಟರ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.ನಿಮ್ಮದು ನೀವು ನೋಡಿಕೊಳ್ಳಿ ಎಂದು ಕಂಡಕ್ಟರ್ ಮಹಿಳೆಗೆ ಆವಾಜ್ ಹಾಕಿದ್ದಾರೆ.ಆದ್ರು ಆಧಾರ್ ಕಾರ್ಡ್ ತೋರಿಸಲು ಮಹಿಳೆ ನಕಾರ ಮಾಡಿದ್ದಾಳೆ.ಮಹಿಳೆ ವಿರುದ್ದ ಉಳಿದ ಪ್ರಯಾಣಿಕರು ಕೆಂಡಮಂಡಲರಾಗಿದ್ದಾರೆ‌.ಪದೇ ಪದೇ ಇಂತ ಘಟನೆಗಳಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ