ಮೇ ತಿಂಗಳ ಬಳಿಕ ದುಬಾರಿಯಾಗಲಿದೆ ಮೊಬೈಲ್ ರಿಚಾರ್ಜ್
ಸದ್ಯಕ್ಕೆ ವೊಡಾಫೋನ್, ಐಡಿಯಾ ಸೇರಿದಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಸಂಕಷ್ಟದಲ್ಲಿವೆ. ಈ ಸಂಸ್ಥೆಗಳು ಚೇತರಿಸಿಕೊಳ್ಳಲು ದರ ಹೆಚ್ಚಳ ಅನಿವಾರ್ಯವಾಗಿದೆ.
ಹೀಗಾಗಿ ಲೋಕಸಭೆ ಚುನಾವಣೆ ಬಳಿಕ ಟೆಲಿಕಾಂ ಸಂಸ್ಥೆಗಳು ಶೇ.20 ರಷ್ಟು ದರ ಏರಿಕೆ ಮಾಡುವ ಸಾಧ‍್ಯತೆಯಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಇಷ್ಟು ದಿನ ಅಗ್ಗದ ದರದಲ್ಲಿ ಸಿಗುತ್ತಿದ್ದ ನಿಮ್ಮ ಮೊಬೈಲ್ ರಿಚಾರ್ಜ್ ಇನ್ನು ಕೊಂಚ ದುಬಾರಿಯಾಗಬಹುದು.
ಕಾಲ ಕಾಲಕ್ಕೆ ಮೊಬೈಲ್ ರಿಚಾರ್ಜ್ ಟ್ಯಾರಿಫ್ ನಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಆದರೆ ಒಮ್ಮೆಲೇ ಶೇ. 20 ರಷ್ಟು ಬದಲಾವಣೆ ಎಂದರೆ ನಿಮ್ಮ ಜೇಬಿಗೆ ಕತ್ತರಿ ಬೀಲುವುದು ಗ್ಯಾರಂಟಿ.